ಆನೇಕಲ್ (ಬೆಂಗಳೂರು):ಬೆಂಗಳೂರು-ಬನ್ನೇರುಘಟ್ಟ ಮುಖ್ಯ ರಸ್ತೆಯ ಕಲ್ಕೆರೆ ಗೇಟ್ ಬಳಿಯಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿನ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ.
ಡಿಆರ್ಎಫ್ಒ ಸಂಪತ್ ಅವರಿಗೆ ಕಳೆದ ನಾಲ್ಕು ದಿನಗಳ ಹಿಂದಷ್ಟೇ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ, ತಮ್ಮ ಕಚೇರಿಯ ಗೇಟ್ ಹೌಸ್ನಲ್ಲಿ ಅವರು ಕ್ವಾರಂಟೈನ್ ಆಗಿದ್ದರು. ಭಾನುವಾರ ಬೆಳಗ್ಗಿನಿಂದ ಕೊಠಡಿ ಬಾಗಿಲು ತೆರೆಯದೇ ಇದ್ದುದರಿಂದ ಸಂಜೆಯವೇಳೆಗೆ ಸಿಬ್ಬಂದಿ ಬಾಗಿಲು ಒಡೆದಾಗ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.