ಕರ್ನಾಟಕ

karnataka

ETV Bharat / city

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಝಳಪಿಸಿದ ಮಾರಕಾಸ್ತ್ರ.. ಇಬ್ಬರ ಬರ್ಬರ ಹತ್ಯೆ - ಇಬ್ಬರ ಬರ್ಬರ ಹತ್ಯೆ

ಸಿಲಿಕಾನ್ ಸಿಟಿಯಲ್ಲಿ ರೌಡಿಗಳ ಆಟ್ಟಹಾಸ ಮಿತಿಮೀರಿದೆ. ಜೆಪಿನಗರದ 24ನೇ ಮುಖ್ಯ ನಡು ರಸ್ತೆಯಲ್ಲಿಯೇ ರೌಡಿಶೀಟರ್ ಸೇರಿ ಇಬ್ಬರನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಬರ್ಬರ ಹತ್ಯೆ

By

Published : Aug 26, 2019, 8:21 AM IST

Updated : Aug 26, 2019, 9:21 AM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೌಡಿಗಳ ಆಟ್ಟಹಾಸ ಮಿತಿಮೀರಿದೆ. ನಡು ರಸ್ತೆಯಲ್ಲಿಯೇ ಸಿನಿಮೀಯ ಶೈಲಿಯಲ್ಲಿ ಅಟ್ಟಾಡಿಸಿಕೊಂಡು ರೌಡಿಶೀಟರ್ ಸೇರಿ ಇಬ್ಬರನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮಂಜ ಮತ್ತು ನವೀನ್ ಎಂಬುವರು ಕೊಲೆಯಾದವರು. ಜೆಪಿನಗರದ 24ನೇ ಮುಖ್ಯ ರಸ್ತೆಯಲ್ಲಿ ಇಬ್ಬರು ರಾತ್ರಿ ವೇಳೆ ಬೈಕ್​ನಲ್ಲಿ ಸಂಚರಿಸುತ್ತಿರುವಾಗ ಹಿಂದಿನಿಂದ ಐ ಟ್ವೆಂಟಿ ವಾಹನದಲ್ಲಿ ಬಂದ 10 ಮಂದಿ ಇಬ್ಬರನ್ನೂ‌ ನಡು ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಘಟನೆ ಹೇಗೆ ನಡೆಯಿತು?:

ಕೊಲೆಯಾದ ನವೀನ್, ಬಿಲ್ಡರ್ ಒಬ್ಬರ ಮಗ. ಸ್ನೇಹಿತ ಮಂಜನ ಜೊತೆ‌ ನಿನ್ನೆ ರಾತ್ರಿ ಜೆಪಿನಗರದ ತಂದೂರಿ ಹೋಟೆಲ್​ಗೆ ಊಟಕ್ಕೆ ಹೋಗಿದ್ದ. ಇದನ್ನ ಗಮನಿಸಿದ ಇವರ ವಿರೋಧಿಗಳ ತಂಡ ಐ ಟ್ವೆಂಟಿ ವಾಹನದಲ್ಲಿ ಸಜ್ಜಾಗಿ ಬಂದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ನಂತರ ಕುಡಿದ ಮತ್ತಿನಲ್ಲಿ ಅವರು ಸನಿಹದಲ್ಲಿದ್ದ ಕಂಬಕ್ಕೆ ತಮ್ಮ ಕಾರನ್ನು ಗುದ್ದಿಸಿದ್ದಾರೆ. ಪರಿಣಾಮ ಕಾರನ್ನು ಅಲ್ಲೇ ಬಿಟ್ಟು ಕೊಲೆಗಾರರು ಪರಾರಿಯಾಗಿದ್ದಾರೆ. ಪೊಲೀಸರು ಕಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇದು ವೀರಭದ್ರಸ್ವಾಮಿ ಎಂಬುವರ ವಾಹನ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಇಬ್ಬರ ಬರ್ಬರ ಹತ್ಯೆ

ಕೊಲೆಯಾದ ಮಂಜನ ತಲಘಟ್ಟಪುರ ಮತ್ತು ಕುಮಾರಸ್ವಾಮಿ ಲೇಔಟ್ ಠಾಣೆಯ ರೌಡಿಶೀಟರ್​ ಪಟ್ಟಿಯಲ್ಲಿದ್ದಾನೆ. ಕಳೆದ ಕೆಲ ವರ್ಷದ ಹಿಂದೆ ದಕ್ಷಿಣ ವಿಭಾಗದ ರೌಡಿ ಟ್ಯಾಬ್ಲೆಟ್ ರಘು ಎಂಬುವನ ಹತ್ಯೆ ಪ್ರಕರಣದಲ್ಲಿ ಮಂಜ ಭಾಗಿಯಾಗಿದ್ದ. ಸದ್ಯ ಇದೇ ದ್ವೇಷದಲ್ಲಿ ಟ್ಯಾಬ್ಲೆಟ್ ರಘು ಕಡೆಯವರಿಂದ ಈ ಕೃತ್ಯ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಜೆಪಿನಗರ ಮತ್ತು ಪುಟ್ಟೇನಹಳ್ಳಿ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಘಟನೆ ನಡೆದ ತಕ್ಷಣ ರಾತ್ರಿಯೇ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಕುಮಾರ್, ಡಿಸಿಪಿ ರೋಹಿಣಿ ಸೆಪೆಟ್ ಮತ್ತು ಡಿಸಿಪಿ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Last Updated : Aug 26, 2019, 9:21 AM IST

ABOUT THE AUTHOR

...view details