ಕರ್ನಾಟಕ

karnataka

ETV Bharat / city

ಸಕಲ ಸರ್ಕಾರಿ ಗೌರವದಿಂದ ಕೆಲವೇ ಕ್ಷಣಗಳಲ್ಲಿ ದೊರೆಸ್ವಾಮಿ ಅಂತ್ಯಕ್ರಿಯೆ - Chamarajapete Chittagara

ಆ್ಯಂಬುಲೆನ್ಸ್ ಗೆ ದೊರೆಸ್ವಾಮಿಯ ಫೋಟೋ ಕಟ್ಟಿ, ಹೂವಿನ ಹಾರಗಳಿಂದ ಅಲಂಕಾರ ಮಾಡಲಾಗಿದ್ದು, ಕೆಲವೇ ನಿಮಿಷಗಳಲ್ಲಿ ಚಾಮರಾಜಪೇಟೆ ಚಿತಾಗಾರಕ್ಕೆ ಪಾರ್ಥಿವ ಶರೀರ ಬರಲಿದೆ. ಚಾಮರಾಜಪೇಟೆ ಚಿತಾಗಾರದಲ್ಲಿ ಆವರಣದಲ್ಲಿ 5 ನಿಮಿಷ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೆಲವೇ ಕ್ಷಣಗಳಲ್ಲಿ ಸರ್ಕಾರಿ ಗೌರವದೊಂದಿಗೆ ಅಂತಿಮ‌ ವಿದಿವಿಧಾನಗಳು ನೆರವೇರಲಿವೆ.

doreswamy-funeral-
ದೊರೆಸ್ವಾಮಿ ಅಂತ್ಯಕ್ರಿಯೆ

By

Published : May 26, 2021, 5:53 PM IST

Updated : May 26, 2021, 6:38 PM IST

ಬೆಂಗಳೂರು:ಚಾಮರಾಜಪೇಟೆ ಚಿತಾಗಾರದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಪಾರ್ಥಿವ ಶರೀರಕ್ಕೆ ಪೂಜೆ ನೆಡೆಯಲಿದ್ದು, ಅವರ ಮಗ ರಾಜು ದೊರೆಸ್ವಾಮಿ ಅಂತಿಮ ವಿಧಿ ವಿಧಾನ ನೆರವೇರಿಸಲಿದ್ದಾರೆ. ಇತ್ತೀಚಿನ ಮಾಹಿತಿಯಂತೆ ಜಯದೇವ ಆಸ್ಪತ್ರೆಯಿಂದ ಚಾಮರಾಜಪೇಟೆ ಚಿತಾಗಾರ ಪಾರ್ಥಿವ ಶರೀರ ಹೊರಟಿದ್ದು, ಪಾರ್ಥಿವ ಶರೀರ ಕೊಂಡೊಯ್ಯಲು ವಿಶೇಷ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.

ದೊರೆಸ್ವಾಮಿ ಅಂತ್ಯಕ್ರಿಯೆ

ಓದಿ: ದೊರೆಸ್ವಾಮಿ ನಿಧನಕ್ಕೆ ಸಂತಾಪ ಸೂಚಿಸಿದ ಹೆಚ್​ಡಿಡಿ ಹಾಗೂ ಹೆಚ್​ಡಿಕೆ

ಆ್ಯಂಬುಲೆನ್ಸ್​​​​​ಗೆ ದೊರೆಸ್ವಾಮಿ ಅವರ ಫೋಟೋ ಕಟ್ಟಿ, ಹೂವಿನ ಹಾರಗಳಿಂದ ಅಲಂಕಾರ ಮಾಡಲಾಗಿದ್ದು, ಕೆಲವೇ ನಿಮಿಷಗಳಲ್ಲಿ ಚಾಮರಾಜಪೇಟೆ ಚಿತಾಗಾರಕ್ಕೆ ಪಾರ್ಥಿವ ಶರೀರ ಬರಲಿದ್ದು, ಚಾಮರಾಜಪೇಟೆ ಚಿತಾಗಾರದಲ್ಲಿ ಆವರಣದಲ್ಲಿ 5 ನಿಮಿಷ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೆಲ ಕ್ಷಣಗಳಲ್ಲಿ ಸರ್ಕಾರಿ ಗೌರವದೊಂದಿಗೆ ಅಂತಿಮ‌ ವಿದಿವಿಧಾನ ನೆರವೇರಲಿದೆ.

ತಯಾರಿ:

ಜಯದೇವ ಆಸ್ಪತ್ರೆಯಿಂದ ಹೊರಬಂದ ಪಾರ್ಥಿವ ಶರೀರಕ್ಕೆ, ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ಕ್ರಿಯೆಯನ್ನು ಸಿಬ್ಬಂದಿ ನಡೆಸಲಿದ್ದಾರೆ. ದೊರೆಸ್ವಾಮಿಗೆ ಗೌರವ ಸಲ್ಲಿಸಲು ರಾಷ್ಟ್ರದ್ವಜ ತಂದಿರುವ ಬಿಬಿಎಂಪಿ ಅಧಿಕಾರಿಗಳು, ಚಾಮರಾಜಪೇಟೆ ಚಿತಾಗಾರದಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಸಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿ ಪೊಲೀಸ್ ಭದ್ರತೆ ಪರಿಶೀಲಿಸಿದ ಕಮಲ್ ಪಂಥ್:

ಸಕಲ ಸರ್ಕಾರಿ ಗೌರವಗಳೊಂದಿಗೆ ದೊರೆಸ್ವಾಮಿ ಪಾರ್ಥಿವ ಶರೀರ ಅಂತ್ಯ ಸಂಸ್ಕಾರಕ್ಕೆ ಸರ್ಕಾರ ಆದೇಶ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಗೆ ಕಮಲ್ ಪಂಥ್ ಭೇಟಿ ನೀಡಿದ್ದರು. ಚಾಮರಾಜಪೇಟೆ ಚಿತಾಗಾರಕ್ಕೆ ರವಾನೆಯಾಗಲಿರುವ ದೊರೆಸ್ವಾಮಿ ಅವರ ಪಾರ್ಥೀವ ಶರೀರಕ್ಕೆ ಪೊಲೀಸ್ ಭದ್ರತೆಯೊಂದಿಗೆ ಪಾರ್ಥೀವ ಶರೀರ ರವಾನೆಗೆ ಸಿದ್ಧತೆ ವೀಕ್ಷಿಸಿದರು.

ಪಾರ್ಥಿವ ಶರೀರ ರವಾನೆಗೆ ಬಂದೂಬಸ್ತ್ ಬಗ್ಗೆ ಡಿಸಿಪಿ ಹರೀಶ್ ಪಾಂಡೆ, ಎಸಿಪಿ ಕರಿಬಸವೇಗೌಡ, ಎಸಿಪಿ ಸುದೀರ್ ಹೆಗ್ಡೆ ಬಳಿ ಕಮಿಷನರ್ ಕಮಲ್ ಪಂಥ್ ಮಾಹಿತಿ ಪಡೆದರು.

ಕೋವಿಡ್ ಪಾಸಿಟಿವ್, ದೇಹದಾನದಿಂದ ಹಿಂದಕ್ಕೆ ಸರಿದ ಕುಟುಂಬ:

ಸೇಂಟ್ ಜಾನ್ ಆಸ್ಪತ್ರೆಗೆ ದೇಹದಾನಕ್ಕೆ ಸಹಿ ಮಾಡಿದ್ದ ದೊರೆಸ್ವಾಮಿ, ಮರಣದ ನಂತರ‌ ಕೊವಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಕಂಡು ಬಂದಿದೆ. ಹೀಗಾಗಿ ದೇಹದಾನದಿಂದ ಕುಟುಂಬ ಹಿಂದೆ ಸರಿದಿದ್ದಾರೆ. ಚಾಮರಾಜಪೇಟೆಯಲ್ಲಿ ಚಿತಗಾರದಲ್ಲಿ ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ಅಂತ್ಯಕ್ರಿಯೆ ಸಿದ್ಧತೆ ನಡೆದಿದೆ.

ಗೌರವಗಳೊಂದಿಗೆ ಅಂತ್ಯಕ್ರಿಯೆ: ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್

ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಮಾಧ್ಯಮಗಳ ಜೊತೆ ಮಾತನಾಡಿದ್ದು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅಂತ್ಯಕ್ರಿಯೆಗೆ ಸಿದ್ದತೆ ಪೂರ್ಣಗೊಂಡಿದೆ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

Last Updated : May 26, 2021, 6:38 PM IST

ABOUT THE AUTHOR

...view details