ಕರ್ನಾಟಕ

karnataka

ETV Bharat / city

"ಹಸಿವಿಗಾಗಿ ಊಟ ಆರ್ಡರ್ ಮಾಡಬೇಡಿ, ಇಷ್ಟಪಟ್ಟು ಮಾಡಿ": ರಾಘವೇಂದ್ರ ರಾಜ್ ಕುಮಾರ್ - ಮೇನಕಾ ಫುಡ್ ಫ್ಯಾಮಿಲಿ ರೆಸ್ಟೋರೆಂಟ್

ಹೋಟೆಲ್‌ಗಳಲ್ಲಿ ಹಸಿವಿಗಾಗಿ ಊಟವನ್ನು ಆರ್ಡರ್ ಮಾಡಬೇಡಿ, ಇಷ್ಟಪಟ್ಟು ಊಟವನ್ನು ಆರ್ಡರ್ ಮಾಡಿ ಎಂದು ಅಪ್ಪಾಜಿ ಹೇಳುತ್ತಿದ್ರು ಎಂದು ರಾಜ್ಯಪ್ರಶಸ್ತಿ ವಿಜೇತ ನಟ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.

KA_BNG_6_Raganna_inauguration_multicusin_Hotel_KA10012
"ಹಸಿವಿಗಾಗಿ ಊಟ ಆರ್ಡರ್ ಮಾಡಬೇಡಿ, ಇಷ್ಟಪಟ್ಟು ಮಾಡಿ": ರಾಘವೇಂದ್ರ ರಾಜ್ ಕುಮಾರ್

By

Published : Feb 6, 2020, 5:44 AM IST

ಬೆಂಗಳೂರು:ಹೋಟೆಲ್‌ಗಳಲ್ಲಿ ಹಸಿವಿಗಾಗಿ ಊಟವನ್ನು ಆರ್ಡರ್ ಮಾಡಬೇಡಿ, ಇಷ್ಟಪಟ್ಟು ಊಟವನ್ನು ಆರ್ಡರ್ ಮಾಡಿ ಎಂದು ಅಪ್ಪಾಜಿ ಹೇಳುತ್ತಿದ್ರು ಎಂದು ರಾಜ್ಯಪ್ರಶಸ್ತಿ ವಿಜೇತ ನಟ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ. ಹೌದು ಜಯನಗರದ 3ನೇ ಬ್ಲಾಕ್ ನಲ್ಲಿರುವ ಮೇನಾಕ ಫುಡ್ಸ್ ಹೋಟೆಲ್ ಉದ್ಘಾಟಿಸಿ ಮಾತನಾಡಿದ ರಾಘಣ್ಣ ಅನ್ನವನ್ನು ವೇಸ್ಟ್ ಮಾಡಬೇಡಿ ಸಂಪೂರ್ವಾಗಿ ಊಟ ಮಾಡಿ ಎಂದರು.

"ಹಸಿವಿಗಾಗಿ ಊಟ ಆರ್ಡರ್ ಮಾಡಬೇಡಿ, ಇಷ್ಟಪಟ್ಟು ಮಾಡಿ": ರಾಘವೇಂದ್ರ ರಾಜ್ ಕುಮಾರ್
ಬೆಂಗಳೂರಿನಲ್ಲಿ ಮೇನಕಾ ಫುಡ್ಸ್ ಪ್ರಥಮ ಹೋಟೆಲ್ ಅನ್ನು ಆರಂಭಿಸಿದ್ದಾರೆ. ಇವರು ಎಲ್ಲಾ ಕಡೆ ಹೋಟೆಲ್ ಆರಂಭಿಸಲಿ, ಒಳ್ಳೆ ಸರ್ವಿಸ್ ಕೊಡಲಿ ಎಂದು ಹಾರೈಸುತ್ತೇನೆ ಎಂದು ಹೋಟೆಲ್ ಮಾಲೀಕರಿಗೆ ಶುಭ ಹಾರೈಸಿದ್ರು. ವೆಂಕಟೇಶ್ವರ ಗ್ರೂಪ್ ಆಫ್ ಕಂಪನಿಯ ಮಾಲೀಕರಾದ ಪ್ರಕಾಶ್ ರಾವ್ ಈ ಹೋಟೆಲ್ ಆರಂಭಿಸಿದ್ದಾರೆ.
ಮೇನಕಾ ಫುಡ್ ಫ್ಯಾಮಿಲಿ ರೆಸ್ಟೋರೆಂಟ್​ನಲ್ಲಿ ಹೈದರಾಬಾದಿ ಬಿರಿಯಾನಿ ಹಾಗೂ ಆಂಧ್ರ ಸ್ಟೈಲ್ ಊಟ ತಿನ್ನುವುದರ ಜೊತೆಗೆ ಒಂದು ಕಾರನ್ನು ಬಂಪರ್ ಬಹುಮಾನವಾಗಿ ಗೆಲ್ಲಬಹುದಾಗಿದೆ. ಹೌದು 250ಕ್ಕಿಂತ ಹೆಚ್ಚಿನ ಬಿಲ್ ಮಾಡಿದ ಗ್ರಾಹಕರಿಗೆ ಹೋಟೆಲ್​ನವರು ಒಂದು ಕೂಪನ್ ನೀಡುತ್ತಾರೆ. ಗ್ರಾಹಕರು ತಮ್ಮ ಮಾಹಿತಿಯನ್ನು ಬರೆದು ಲಕ್ಕಿ ಡಿಪ್​ನಲ್ಲಿ ಹಾಕಬೇಕು. ಈ ಲಕ್ಕಿ ಡಿಪ್ ಅನ್ನು ಮಾರ್ಚ್ 20ಕ್ಕೆ ಒಪನ್ ಮಾಡಲಿದ್ದು, ಯಾವ ಗ್ರಾಹಕರ ಕೂಪ್ ಆಯ್ಕೆ ಆಗುತ್ತೆ ಅವರು ಅಲ್ಟೋ ಕಾರ್ ಗೆಲ್ಲುತ್ತಾರೆ.
ಅಲ್ಲದೆ ಮೇನಕಾ ಫುಡ್ಸ್ ರೆಸ್ಟೋರೆಂಟ್​ನಲ್ಲಿ ಪ್ರತಿ ಖಾದ್ಯದ ಮೇಲೆ ನೂರು ರೂಪಾಯಿ ಆಫರ್ ನೀಡಲಾಗಿದ್ದು, ಈ ಆಫರ್​ ಫೆಬ್ರವರಿ 9 ರವರೆಗೆ ಮಾತ್ರ ಇರಲಿದೆ. ಸದ್ಯ ಮೇನಕಾ ಫುಡ್ಸ್ ರೆಸ್ಟೋರೆಂಟ್ ಬೆಂಗಳೂರಿನಲ್ಲಿದ್ದು, ಮುಂದಿನ ದಿನಗಳಲ್ಲಿ ಚೆನ್ನೈ, ಪುಣೆ, ಸಿಂಗಪುರ್, ದುಬೈ, ಮಲೇಶಿಯಾ, ಬ್ಯಾಂಕಾಕ್ ಮತ್ತು ಹಾಂಕಾಂಗ್​ನಲ್ಲಿ ಹೋಟೆಲ್ ಆರಂಭವಾಗಲಿದೆ.

ABOUT THE AUTHOR

...view details