ಬೆಂಗಳೂರು: ಮುಖ್ಯಮಂತ್ರಿಗಳ ಕೋವಿಡ್-19 ತುರ್ತು ಪರಿಹಾರ ನಿಧಿಗೆ ಮತ್ತೆ 1.5 ಕೋಟಿ ರೂಪಾಯಿಗಳ ದೇಣಿಗೆ ಹರಿದುಬಂದಿದೆ.
ಸಿಎಂ ಕೋವಿಡ್ ನಿಧಿಗೆ ಎನ್ಪಿಎಸ್ ಗ್ರೂಪ್ನಿಂದ 1 ಕೋಟಿ, ಸಿಎಂಆರ್ ಟ್ರಸ್ಟ್ನಿಂದ 50 ಲಕ್ಷ ರೂ. ದೇಣಿಗೆ - banglore news
ಮುಖ್ಯಮಂತ್ರಿ ಕೋವಿಡ್-19 ಪರಿಹಾರ ನಿಧಿಗೆ ಎನ್ಪಿಎಸ್ ಗ್ರೂಪ್ನಿಂದ 1 ಕೋಟಿ ರೂಪಾಯಿ ಹಾಗೂ ಸಿಎಂಆರ್ ಟ್ರಸ್ಟ್ನಿಂದ 50 ಲಕ್ಷ ರೂಪಾಯಿ ದೇಣಿಗೆ ನೀಡಲಾಗಿದೆ.
ಸಿಎಂ ಕೋವಿಡ್ ನಿಧಿಗೆ ಎನ್ಪಿಎಸ್ ಗ್ರೂಪ್ನಿಂದ 1 ಕೋಟಿ,ಸಿಎಂಆರ್ ಟ್ರಸ್ಟ್ನಿಂದ 50 ಲಕ್ಷ ದೇಣಿಗೆ
ಸಿಎಂ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿದ್ದ ಎನ್ಪಿಎಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ಚೇರ್ಮನ್ ಡಾ. ಕೆ.ಪಿ ಗೋಪಾಲಕೃಷ್ಣ ಅವರು ಮುಖ್ಯಮಂತ್ರಿ ಕೋವಿಡ್ ಪರಿಹಾರ ನಿಧಿಗೆ 1 ಕೋಟಿ ರೂ.ಗಳ ದೇಣಿಗೆ ಚೆಕ್ಅನ್ನು ಹಸ್ತಾಂತರಿಸಿದ್ದಾರೆ.
ಇನ್ನು, ಸಿಎಂಆರ್ ಜ್ಞಾನಾಧರ ಟ್ರಸ್ಟ್ನ ಕೆ ಸಿ ರಾಮಮೂರ್ತಿ ಅವರು ಸಹ 50 ಲಕ್ಷ ರೂ.ಗಳ ಚೆಕ್ ಹಸ್ತಾಂತರಿಸಿದ್ದಾರೆ.