ಬೆಂಗಳೂರು: ನಗರದಲ್ಲಿ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದಿರುವ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ಏಪ್ರಿಲ್ 19ರಂದು ಬೆಳಗ್ಗೆ ರಸ್ತೆ ದಾಟುತ್ತಿದ್ದ ನಾಯಿ ಮೇಲೆ ಕಾರು ಹತ್ತಿಸಿ ಚಾಲಕ ಬಳಿಕ ವಾಹನವನ್ನು ನಿಲ್ಲಿಸಿದೇ ಪರಾರಿಯಾಗಿದ್ದಾನೆ. ಅಪಘಾತಕ್ಕೊಳಗಾದ ನಾಯಿ ನಡು ರಸ್ತೆಯಲ್ಲೇ ವಿಲವಿಲ ಒದ್ದಾಡಿದೆ. ಇದನ್ನು ಕಂಡ ಮಹಿಳೆ ನಾಯಿಯನ್ನು ಆರೈಕೆ ಮಾಡಿದ್ರೂ ಕೂಡ ಬದುಕುಳಿದಿಲ್ಲ.
ಬೆಂಗಳೂರು: ಬೀದಿನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಚಾಲಕ - dog killed by car accident
ಬೀದಿ ನಾಯಿ ಮೇಲೆ ಕಾರು ಹರಿದು ನಾಯಿ ಸಾವನ್ನಪ್ಪಿದೆ. ಸ್ಥಳದಲ್ಲಿ ಕಾರು ಚಾಲಕ ವಾಹನವನ್ನು ನಿಲ್ಲಿಸಿದೇ ಪರಾರಿಯಾಗಿದ್ದಾನೆ.
ಬೀದಿನಾಯಿ ಮೇಲೆ ಕಾರು ಹತ್ತಿಸಿದ ಚಾಲಕ
ಇದನ್ನೂ ಓದಿ:ಮಾದಕ ವಸ್ತು ಮಾರಾಟ : ಬೆಂಗಳೂರಲ್ಲಿ ನೈಜೀರಿಯನ್ ಪ್ರಜೆ ಅರೆಸ್ಟ್
ನಾಯಿ ಮೇಲೆ ಕಾರು ಹತ್ತುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಕುರಿತು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಘಟನೆ ಸಂಬಂಧ ಕಾರು ಚಾಲಕನ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದು, ಸತ್ಯನಾರಾಯಣ ಎಂಬ ವ್ಯಕ್ತಿಗೆ ಸೇರಿದ ಕಾರು ಎಂದಷ್ಟೇ ಗೊತ್ತಾಗಿದೆ.
Last Updated : Apr 21, 2022, 2:47 PM IST