ಕರ್ನಾಟಕ

karnataka

ETV Bharat / city

ಮನೆ ಮುಂದೆ ಕಸ ಹಾಕಬೇಡಿ ಅಂದಿದ್ದಕ್ಕೆ ನಾಯಿ ಚೂ ಬಿಟ್ಟ ಆಸಾಮಿ! - ಮನೆ ಮುಂದೆ ಕಸ ಹಾಕಬೇಡಿ ಅಂದಿದ್ದಕ್ಕೆ ನಾಯಿ ಚೂ ಬಿಟ್ಟ ಆಸಾಮಿ

ಮನೆ ಮುಂದೆ ಕಸ ಹಾಕಬೇಡಿ ಎಂದ ಸೆಕ್ಯೂರಿಟಿ ಮೇಲೆ ನಾಯಿ ಚೂ ಬಿಟ್ಟಿರುವ ಘಟನೆ ರಾಜಧಾನಿಯಲ್ಲಿ‌ ನಡೆದಿದೆ.

Dog attacks on security gard in benglore
ಸೆಕ್ಯೂರಿಟಿ ಮೇಲೆ ನಾಯಿ ಚೂ ಬಿಟ್ಟ ವ್ಯಕ್ತಿ

By

Published : Mar 3, 2020, 4:04 AM IST

ಬೆಂಗಳೂರು: ಮನೆ ಮುಂದೆ ಕಸ ಹಾಕಬೇಡಿ ಎಂದಿದ್ದಕ್ಕೆ ಪಕ್ಕದ‌ ಮನೆಯ ಸೆಕ್ಯೂರಿಟಿ ಮೇಲೆ ನಾಯಿ ಚೂ ಬಿಟ್ಟಿರುವ ಘಟನೆ ರಾಜಧಾನಿಯಲ್ಲಿ‌ ನಡೆದಿದೆ.

ಸೆಕ್ಯೂರಿಟಿ ಮೇಲೆ ನಾಯಿ ಚೂ ಬಿಟ್ಟ ವ್ಯಕ್ತಿ

ಬೆಂಗಳೂರಿನ ಗಿರಿನಗರ‌ ಪೊಲೀಸ್ ಠಾಣಾ ವ್ಯಾಪ್ತಿಯ ಈರಣ್ಣಗುಡ್ಡದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಸುರೇಶ್ ಮೂರ್ತಿ, ಗಂಭೀರ ಗಾಯಗೊಂಡು‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಕ್ಕದ ಮನೆಯ ಮಾಲೀಕ ಸುರೇಶ್ ದಾಸಪ್ಪ ಈ ಕೃತ್ಯ ಎಸಗಿರುವುದಾಗಿ ಆರೋಪಿಸಿದ್ದಾರೆ.

ಕಸ ಎಸೆಯುವ ವಿಚಾರದಲ್ಲಿ ಪಕ್ಕದ ಅಪಾರ್ಟ್ಮೆಂಟ್ ಸೆಕ್ಯೂರಿಟಿಯೊಂದಿಗೆ ಸುರೇಶ್ ದಾಸಪ್ಪ ಕ್ಯಾತೆ ತೆಗೆದಿದ್ರು. ಅಪಾರ್ಟ್​ಮೆಂಟ್ ಪಕ್ಕದಲ್ಲಿರುವ ಖಾಲಿ ಸೈಟ್​ನಲ್ಲಿ ಕಸ ಹಾಕುತ್ತಿರುವುದನ್ನು‌ ಕಂಡು ಇಲ್ಲಿ ಕಸ ಹಾಕಬೇಡಿ ಅಂತಾ ಹೇಳಿದ್ದರೂ‌ ಸೋಮವಾರ ರಾತ್ರಿ ಮತ್ತೆ ಸುರೇಶ್ ದಾಸಪ್ಪ ಕಸದ ರಾಶಿ ತಂದು ಹಾಕಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ತನ್ನ ನಾಯಿ ಚೂ ಬಿಟ್ಟು ಹೆದರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ABOUT THE AUTHOR

...view details