ಮೈಸೂರು: ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ, ಪದ್ಮಶ್ರೀ ಪುರಸ್ಕೃತ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದಿಂದ ಬುಧವಾರ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ವಿವಿಯ 9ನೇ ಘಟಿಕೋತ್ಸವದಲ್ಲಿ ರಾಜೀವ್ ತಾರಾನಾಥ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನಕ್ಕೆ ಆಯ್ಕೆ ಮಾಡಲಾಗಿತ್ತು. ಘಟಿಕೋತ್ಸವ ಸಮಾರಂಭದಲ್ಲಿ ತಾರಾನಾಥರು ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಕುವೆಂಪುನಗರದಲ್ಲಿರುವ ಅವರ ನಿವಾಸದಲ್ಲಿ ಪದವಿ ಪ್ರದಾನ ಮಾಡಿ ಗೌರವ ಪೂರ್ವಕವಾಗಿ ಸನ್ಮಾನಿಸಿದರು.
ಪಂಡಿತ್ ರಾಜೀವ್ ತಾರನಾಥ್ರಿಗೆ ರಾಣಿ ಚೆನ್ನಮ್ಮ ವಿವಿ ಇಂದ ಗೌರವ ಡಾಕ್ಟರೇಟ್ ಬಳಿಕ ರಾಜೀವ್ ತಾರಾನಾಥ್ ಅವರು ಮಾತನಾಡಿ, ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ ಪ್ರೀತಿಯಿಂದ ನನ್ನನ್ನು ನೆನಪಿಸಿಕೊಂಡಿದೆ. ತನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ನೀವು ಕೊಟ್ಟ ಪ್ರೀತಿಗೆ ಬಹಳ ಅಭಾರಿಯಾಗಿದ್ದೇನೆ ಎಂದರು. ಸಂಗೀತದಲ್ಲಿ ನಾನೊಬ್ಬ ಶಿಷ್ಯ. ನನ್ನ ಗುರು ಉಸ್ತಾದ್ ಅಲಿ ಅಕ್ಬರ್ ಖಾನ್. ಇವರೇ ನನ್ನ ದೇವರು. ಗುರುಗಳು ಯಾವಾಗಲೂ ನನ್ನ 3 ಬೆರಳಿನಲ್ಲಿ ಕುಳಿತಿರುತ್ತಾರೆ. ಸರೋದ್ ಅನ್ನು ಉತ್ತಮವಾಗಿ ಬಾರಿಸಿದರೆ ಅವರು ಇರುತ್ತಾರೆ. ಇಲ್ಲದಿದ್ದರೆ ಹೊರಟು ಹೋಗುತ್ತಾರೆ ಎಂದು ಗುರುಗಳನ್ನು ಸ್ಮರಿಸಿದರು.
ಇದನ್ನೂ ಓದಿ:ಸಚಿವ ಸಿಸಿ ಪಾಟೀಲ್ ವಿರುದ್ಧ ದಿಂಗಾಲೇಶ್ವರ ಶ್ರೀಗಳ ಪ್ರತಿಭಟನೆ: ಶ್ರೀಗಳನ್ನು ತಡೆದ ಪೊಲೀಸರು