ಕರ್ನಾಟಕ

karnataka

ETV Bharat / city

ಪರಪ್ಪನ ಅಗ್ರಹಾರಕ್ಕೆ ಕೊರಿಯರ್ ಪಾರ್ಸೆಲ್ ನಿಷೇಧ.. ಮುಖ್ಯ ಅಧೀಕ್ಷಕರಿಂದ ಹೊಸ ಗೈಡ್ ಲೈನ್ಸ್ - ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆ

ಅಪರಿಚಿತರ ಹೆಸರಿನಲ್ಲಿ ಡ್ರಗ್ಸ್ ಪಾರ್ಸೆಲ್​ ಮಾಡಿ ಕೆಲ ಕೈದಿಗಳನ್ನು ಸಿಲುಕಿಸಲು ಜೈಲಲ್ಲಿರುವವರಿಂದ ಷಡ್ಯಂತ್ರ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಹಿನ್ನೆಲೆ ಜೈಲು ಮುಖ್ಯ ಅಧೀಕ್ಷಕ ರಮೇಶ್ ಹೊಸ ಗೈಡ್ ಲೈನ್ಸ್ ತಂದಿದ್ದಾರೆ.

Parappana Agrahara Jail
ಪರಪ್ಪನ ಅಗ್ರಹಾರ ಜೈಲು

By

Published : Aug 8, 2022, 4:02 PM IST

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುವ ಅಕ್ರಮಗಳನ್ನು ತಹಬದಿಗೆ ತರಲು ಇಲಾಖೆ ಮುಂದಾಗಿದ್ದು, ಇನ್ಮುಂದೆ ಸಜಾಬಂಧಿಗಳಿಗೆ ಬರುವ ಕೊರಿಯರ್ ಹಾಗೂ ಯಾವುದೇ ರೀತಿಯ ಪಾರ್ಸೆಲ್​ಗಳಿಗೆ ನಿಷೇಧ ಹೇರಲಾಗಿದೆ. ಜೈಲಿನಲ್ಲಿರುವ ಸಜಾಬಂಧಿಗಳ‌ ಸ್ನೇಹಿತರು, ಸಂಬಂಧಿಗಳು ಹಾಗೂ ಅಪರಿಚಿತರಿಂದ ಪರಪ್ಪನ‌ ಅಗ್ರಹಾರ ಜೈಲಿಗೆ ಅನುಮತಿ ಇಲ್ಲದೆ ಪತ್ರಗಳು, ಕೊರಿಯರ್ ಹಾಗೂ ಪಾರ್ಸೆಲ್​ಗಳನ್ನು ಕಳುಹಿಸದಂತೆ ಹೊಸ ನಿಯಮ ಜಾರಿಗೆ ತರಲಾಗಿದೆ.

ಒಂದು ವೇಳೆ ಪಾರ್ಸೆಲ್ ಕಳುಹಿಸಬೇಕಾದ ಅನಿವಾರ್ಯವಿದ್ದರೆ ಒಂದು ವಾರದ ಮುಂಚೆಯೇ ಜೈಲಿ‌ನ ಮುಖ್ಯ ಅಧೀಕ್ಷಕರಿಂದ ಅನುಮತಿ ಪಡೆಯುವುದು ಕಡ್ಡಾಯ. ಅನುಮತಿ ಪಡೆಯದೇ ಹೋದರೆ ಪಾರ್ಸೆಲ್​ಗಳನ್ನು ಬಂದ ವಿಳಾಸಕ್ಕೆ ಹಿಂದೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪರಿಚಿತರ ಹೆಸರಿನಲ್ಲಿ ಡ್ರಗ್ಸ್ ಪಾರ್ಸೆಲ್ ಮಾಡಿ ಕೆಲ ಕೈದಿಗಳನ್ನು ಸಿಲುಕಿಸಲು ಜೈಲಲ್ಲಿರುವವರಿಂದ ಷಡ್ಯಂತ್ರ ನಡೆದಿರುವುದು ಬೆಳಕಿಗೆ ಬಂದಿದೆ. ಗಾಂಜಾ, ಬೀಡಿ ಮಾದಕವಸ್ತುಗಳನ್ನು ಅಪರಿಚಿತರ ಹೆಸರಲ್ಲಿ ಪಾರ್ಸೆಲ್ ಕಳುಹಿಸಲಾಗುತ್ತಿತ್ತು. ಪಾರ್ಸೆಲ್​ ಬಂದಿದ್ದ ಕೈದಿಯ ಹೆಸರು ನೋಡಿ ಕ್ರಮ ಕೈಗೊಳ್ಳುವ ಜೈಲಾಧಿಕಾರಿಗಳಿಗೆ ಅನುಮಾನ ಮೂಡುತ್ತಿತ್ತು. ಈ ಕುರಿತಾಗಿ ಕೆಲ ಕೈದಿಗಳು ಮತ್ತು ಸಿಬ್ಬಂದಿ ಜೈಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಹಾಗಾಗಿ ಜೈಲು ಮುಖ್ಯ ಅಧೀಕ್ಷಕ ರಮೇಶ್‌ ಹೊಸ ಗೈಡ್ ಲೈನ್ಸ್ ತಂದಿದ್ದಾರೆ.

ಆದೇಶದಲ್ಲಿ ಏನಿದೆ ?:ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಜೈಲಿಗೆ ಕೊರಿಯರ್, ಪಾರ್ಸೆಲ್​ ಮೂಲಕ ನಿಷೇಧಿತ ವಸ್ತುಗಳು ಪೂರೈಕೆಯಾಗಿರುವ ಕುರಿತು ಜುಲೈ 6ರಂದು ಪ್ರಕರಣ ದಾಖಲಾಗಿದೆ. ಹಾಗಾಗಿ ಬಂಧಿಗಳಿಗೆ ಸಂದರ್ಶನ ಸಮಯವನ್ನು ನೀಡಲಾಗಿದೆ. ಇದನ್ನು ಹೊರತಾಗಿ ಇನ್ನು ಮುಂದೆ ಯಾವುದೇ ಕೊರಿಯರ್, ಪಾರ್ಸೆಲ್ ಬರುವಂತಿಲ್ಲ. ಒಂದು ವೇಳೆ ಬಂದರೆ, ಬಂದ ಜಾಗಕ್ಕೆ ವಾಪಸ್​ ಕಳುಹಿಸಲಾಗುವುದು. ಹಾಗಾಗಿ ಕೈದಿಗಳು ತಮ್ಮ ಕುಟುಂಬದ ಸದಸ್ಯರು, ವಕೀಲರು ಹಾಗೂ ಸ್ನೇಹಿತರಿಗೆ ಕೊರಿಯರ್, ಪಾರ್ಸೆಲ್ ಕಳುಹಿಸದಂತೆ ತಿಳಿಸಬೇಕೆಂದು ಸೂಚಿಸಲಾಗಿದೆ.

ಇದನ್ನೂ ಓದಿ:ಖೈದಿಗೆ ಡ್ರಗ್ಸ್ ಸರಬರಾಜು: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜೈಲು ಸಹಾಯಕ ಅಧೀಕ್ಷಕ

ABOUT THE AUTHOR

...view details