ಬೆಂಗಳೂರು :ಸುಪ್ರೀಂಕೋರ್ಟ್ನಲ್ಲಿ ಕೇಸ್ ಇತ್ಯರ್ಥ ಆಗುವವರೆಗೂ ಹೈಕೋರ್ಟ್ ನಿರ್ದೇಶನದಂತೆ ಬೆಂಗಳೂರಿನ ಅಕ್ರಮ ಕಟ್ಟಡಗಳನ್ನು ಸಕ್ರಮ ಮಾಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಆಗ್ರಹಿಸಿದ್ದಾರೆ.
ಹೈಕೋರ್ಟ್ ನಿರ್ದೇಶನದಂತೆ ಅಕ್ರಮ ಕಟ್ಟಡಗಳ ಸಕ್ರಮ ಮಾಡಿ : ರಾಮಲಿಂಗ ರೆಡ್ಡಿ - ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ
ಸರ್ಕಾರ ಹೈಕೋರ್ಟ್ಗೆ ಮನವಿ ಮಾಡಿಕೊಂಡು ಶೇ.5ಕ್ಕಿಂತ ಕಮ್ಮಿ ಇರುವ ಕಟ್ಟಡಗಳನ್ನು ಸಕ್ರಮ ಮಾಡಲಿ. ಹೈಕೋರ್ಟ್ ಸಕ್ರಮ ನಿಯಮಗಳನ್ನು ಎತ್ತಿಹಿಡಿದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಆಗ್ರಹಿಸಿದ್ದಾರೆ..
![ಹೈಕೋರ್ಟ್ ನಿರ್ದೇಶನದಂತೆ ಅಕ್ರಮ ಕಟ್ಟಡಗಳ ಸಕ್ರಮ ಮಾಡಿ : ರಾಮಲಿಂಗ ರೆಡ್ಡಿ KPCC president Ramalinga Reddy talked to Press](https://etvbharatimages.akamaized.net/etvbharat/prod-images/768-512-14842947-thumbnail-3x2-bng.jpg)
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.5ಕ್ಕಿಂತ ಕಮ್ಮಿ ಅಕ್ರಮ ಇರುವ ಕಟ್ಟಡಗಳನ್ನು ಸಕ್ರಮ ಮಾಡಿ. ಈ ಬಗ್ಗೆ ಸರ್ಕಾರ ಹೈಕೋರ್ಟ್ಗೆ ಮನವಿ ಮಾಡಿಕೊಂಡು ಶೇ.5ಕ್ಕಿಂತ ಕಮ್ಮಿ ಇರುವ ಕಟ್ಟಡಗಳನ್ನು ಸಕ್ರಮ ಮಾಡಲಿ. ಹೈಕೋರ್ಟ್ ಸಕ್ರಮ ನಿಯಮಗಳನ್ನು ಎತ್ತಿಹಿಡಿದಿದೆ. ಆದರೆ, ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶಕ್ಕೆ ತಡೆ ಕೊಟ್ಟಿದೆ. ಕೇಸ್ ವಿಚಾರಣೆ ಪೆಂಡಿಂಗ್ ಇದೆ ಎಂದರು.
ಬಿಬಿಎಂಪಿ ಚುನಾವಣೆ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ ಸಿಎಂ ಇದ್ದಾಗ ಕಾಂಗ್ರೆಸ್ ಸಮಯಕ್ಕೆ ಸರಿಯಾಗಿ ಬಿಬಿಎಂಪಿ ಚುನಾವಣೆ ನಡೆಸಿತ್ತು. ಈಗ ಬಿಜೆಪಿ ಅವಧಿಯಲ್ಲಿ ಚುನಾವಣೆ ವಿಳಂಬವಾಗಿದೆ. ಹೊಸ ಕಾಯ್ದೆ ತರುತ್ತೇವೆ ಅಂದ್ರು. ನಾವೆಲ್ಲ ಸಹಕಾರ ಕೊಟ್ಟೆವು. ಹೊಸ ಕಾಯ್ದೆ ತಂದರೂ ಬಿಬಿಎಂಪಿ ಚುನಾವಣೆ ಮಾಡ್ತಿಲ್ಲ. ಈಗಲೇ ವಿಳಂಬವಾಗಿದೆ. ಆದಷ್ಟು ಬೇಗ ಬಿಬಿಎಂಪಿ ಚುನಾವಣೆ ನಡೆಸಲಿ ಎಂದು ಆಗ್ರಹಿಸಿದರು.