ಕರ್ನಾಟಕ

karnataka

ETV Bharat / city

ಪಕ್ಷ ಹೇಗೆ ಕಟ್ಟುವೆ ಎಂಬುದನ್ನು ನೀವೇ ನೋಡಿ: ಡಿಕೆಶಿ - Siddaramaiah and other leaders congratulate D.k.shivakumar

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್​ ಆಯ್ಕೆಯಾದ ಹಿನ್ನೆಲೆಯಲ್ಲಿ ಶುಭ ಕೋರಲು ಆಗಮಿಸಿದ ಅಭಿಮಾನಿಗಳಿಗೆ ಹೂ ಗುಚ್ಛ, ಹಾರಗಳನ್ನು ತರಬೇಡಿ ಎಂದು ಡಿಕೆಶಿ ಮನವಿ ಮಾಡಿದ್ದಾರೆ.

dkshivakumar-appointed-karnataka-congress-chief
ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್

By

Published : Mar 12, 2020, 1:05 PM IST

ಬೆಂಗಳೂರು: ಅಭಿಮಾನಗಳಲ್ಲಿ ಮನವಿ ಮಾಡುವೆ. ಯಾರೂ ಹೂವಿನ ಮಾಲೆ, ಬೊಕೆಗಳನ್ನು ತರಬೇಡಿ. ಅದಕ್ಕೆ ತಗಲುವ ವೆಚ್ಚವನ್ನು ಒಳ್ಳೆಯ ಕಾರ್ಯಕ್ಕೆ ಬಳಸಿ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮನವಿ ಮಾಡಿದ್ದಾರೆ.

ನಿಮಗೆ ನನ್ನ ಮೇಲೆ ಪ್ರೀತಿ, ಅಭಿಮಾನ ಇದ್ದೇ ಇದೆ. ಆದರೆ ಹೂವುಗಳ ಹಾರ ನನಗೆ ಆರೋಗ್ಯದ ದೃಷ್ಟಿಯಿಂದ ಅಲರ್ಜಿ. ಕಾರ್ಯಕರ್ತರು ಹಣವನ್ನು ವ್ಯರ್ಥ ಮಾಡಬೇಡಿ. ಸ್ವೀಟ್, ಕೇಕ್ ತಿನ್ನಿಸೋದು ಬೇಡ. ಅದು ಹಾನಿಕಾರಕ ಎಂದು ಹೇಳಿದರು.

ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆ ಮಾಡಿದಕ್ಕೆ ಹೈಕಾಮಂಡ್​ಗೆ ನನ್ನ ಧನ್ಯವಾದ. ಬೂತ್ ಮಟ್ಟದಿಂದ ಪಕ್ಷ ಕಟ್ಟಬೇಕಿದೆ. ರಾಜ್ಯ ಕಾಂಗ್ರೆಸ್​ನಲ್ಲಿ ಸಮಸ್ಯೆ ಇದೆ ಎಂದರೆ ಇದೆ. ಇಲ್ಲ ಅಂದರೆ ಇಲ್ಲ. ನನಗೆ ಯಾವುದೂ ಕಷ್ಟವಲ್ಲ. ಹೇಗೆ ಪಕ್ಷ ಕಟ್ಟುತ್ತೇನೆ ನೀವೇ ನೋಡಿ ಎಂದು ಹೇಳಿದರು.

ಇದೇ ವೇಳೆ ಹಿರಿಯ ಪತ್ರಕರ್ತ ಹಾಗೂ ತಮ್ಮ ಮಾಜಿ ಪತ್ರಿಕಾ ಕಾರ್ಯದರ್ಶಿ ವಿಜಯೇಂದ್ರ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್​ ಆಯ್ಕೆಯಾದ ಹಿನ್ನೆಲೆಯಲ್ಲಿ ಶುಭ ಕೋರಲು ಅಭಿಮಾನಿಗಳ ದಂಡೇ ಹರಿದು ಬಂದಿದೆ.

For All Latest Updates

TAGGED:

ABOUT THE AUTHOR

...view details