ಕರ್ನಾಟಕ

karnataka

ETV Bharat / city

ಸರ್ಕಾರದ ಮಂತ್ರಿಗಳಿಗೂ, ಅಧಿಕಾರಿಗಳಿಗೂ ಹೊಂದಾಣಿಕೆಯಿಲ್ಲ: ಡಿ.ಕೆ.ಸುರೇಶ್ - ಬೆಂಗಳೂರು ಸುದ್ದಿ

ಲ್ಯಾಬ್ ಟೆಕ್ನಿಶಿಯನ್ಸ್ ಟೆಸ್ಟಿಂಗ್ ಪ್ರಕರಣ ಹೊರಬಂದಿವೆ. ಇಷ್ಟಾದರೂ ಸರ್ಕಾರ ಸರಿಯಾಗಿ ‌ಪರಿಗಣಿಸುತ್ತಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ದೂರಿದ್ದಾರೆ.

DK suresh
ಡಿ.ಕೆ. ಸುರೇಶ್

By

Published : Apr 18, 2021, 5:23 PM IST

ಬೆಂಗಳೂರು:ಸರ್ಕಾರದ ಮಂತ್ರಿಗಳಿಗೂ, ಅಧಿಕಾರಿಗಳಿಗೂ ಹೊಂದಾಣಿಕೆಯಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಪಾಸಿಟಿವ್ ವಿಚಾರದಲ್ಲಿ ಉಂಟಾಗುತ್ತಿರುವ ಗೊಂದಲ ವಿಚಾರದ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೇಕಾಬಿಟ್ಟಿ ಟೆಸ್ಟ್ ಮಾಡ್ತಿರೋದು ಗಮನಕ್ಕೆ ಬಂದಿದೆ. ಕೆಲವು ಕಡೆ ಪಾಸಿಟಿವ್ ಬರುತ್ತೆ. ಅದೇ ಬೇರೆ ಕಡೆ ಮಾಡಿಸಿದಾಗ ನೆಗೆಟಿವ್ ಬರ್ತಿದೆ. ಸಾರ್ವಜನಿಕರ ಜೊತೆ ಸರ್ಕಾರ ಚೆಲ್ಲಾಟವಾಡ್ತಿದೆ ಎಂದರು.

ಲ್ಯಾಬ್ ಟೆಕ್ನಿಶಿಯನ್ಸ್ ಟೆಸ್ಟಿಂಗ್ ಪ್ರಕರಣ ಹೊರಬಂದಿವೆ. ಇಷ್ಟಾದರೂ ಸರ್ಕಾರ ಸರಿಯಾಗಿ ‌ಪರಿಗಣಿಸುತ್ತಿಲ್ಲ. ಆರೋಗ್ಯ ಇಲಾಖೆ ನಾವು ‌ಮಾಡಿದ್ದೇ ಸರಿ ಅಂತ ಹೊರಟಿದೆ ಎಂದು ಹೇಳಿದರು.

ಸಾವಿನ ಸಂಖ್ಯೆ ದಿನವೂ ಹೆಚ್ಚಾಗ್ತಿದೆ. ಸೋಂಕಿನ ಸಂಖ್ಯೆಯೂ ಹೆಚ್ಚುತ್ತಿದೆ. ಜನರ ಜೊತೆ ಸರ್ಕಾರ ಚೆಲ್ಲಾಟವಾಡ್ತಿದೆ. ಶವ ಸಂಸ್ಕಾರ ಮಾಡೋಕು ಸರಿಯಾದ ವ್ಯವಸ್ಥೆಯಿಲ್ಲ. ಸರ್ಕಾರ ಸರಿಯಾದ ವ್ಯವಸ್ಥೆ ಮಾಡ್ತಿಲ್ಲ. ಅಂತಹ ಸ್ಥಿತಿಗೆ ಸರ್ಕಾರ ರಾಜ್ಯದ ಜನರನ್ನ ತಂದಿಟ್ಟಿದೆ ಎಂದರು.

ಹಿರಿಯರು, ಸಾಹಿತಿಗಳು ಕಣ್ಣಲ್ಲಿ ನೀರು ಹಾಕ್ತಿದ್ದಾರೆ. ಶವ ಸಂಸ್ಕಾರಕ್ಕೆ ಅವಕಾಶ ಕೊಡಿ ಅಂತ ಕಣ್ಣೀರು ಹಾಕ್ತಿದ್ದಾರೆ. ಇಂತಹ ನೀಚ ಸರ್ಕಾರ ಇದಾಗಿದೆ. ನಮ್ಮ ಸಂಪ್ರದಾಯದಲ್ಲಿ ಅದರದ್ದೇ ಆದ ಮಾನ್ಯತೆಯಿದೆ. ಇದರ ಬಗ್ಗೆ ನಾವಿನ್ನೇನು ‌ಹೇಳಬೇಕೋ ಗೊತ್ತಿಲ್ಲ. ಚಿತಾಗಾರಗಳಲ್ಲಿ ಕ್ಯೂ ನಿಲ್ಲಬೇಕಾಗಿದೆ ಎಂದು ಹೇಳಿದರು.

ABOUT THE AUTHOR

...view details