ಬೆಂಗಳೂರು: ಬಿಜೆಪಿ ನಾಯಕರ ಕಾರು ನಿಮ್ಮ ಪಕ್ಕದಲ್ಲಿ ಹೋಗುವಾಗ ನಿಮ್ಮ ಫೋನ್ ಕ್ಯಾಮರಾದಿಂದ ರೆಕಾರ್ಡ್ ಮಾಡಿಕೊಳ್ಳಿ ಎಂದು ಸಾರ್ವಜನಿಕರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ.
ತುಳಸಿ ಪೂಜೆ ವಿಶೇಷ ವಿಡಿಯೋ ಬಿಡುಗಡೆ ಮಾಡಿರುವ ಅವರು ಲಖೀಮ್ಪುರ ಹಿಂಸಾಚಾರದಲ್ಲಿ ರೈತರು ಮೃತಪಟ್ಟ ಘಟನೆಯನ್ನು ಉದ್ದೇಶವಾಗಿಟ್ಟುಕೊಂಡು ಮಾತನಾಡಿರುವ ಶಿವಕುಮಾರ್, ನಿಮ್ಮ ಸಮೀಪದಲ್ಲಿ ಬಿಜೆಪಿ ನಾಯಕರು ವಾಹನದಲ್ಲಿ ತೆರಳುತ್ತಿದ್ದರೆ ವಿಡಿಯೋ ಮಾಡಿಕೊಳ್ಳಿ. ಯಾವಾಗ, ಯಾರ ಮೇಲೆ ಕಾರು ಹತ್ತಿಸಿ ಕೊಲ್ಲುತ್ತಾರೆ ತಿಳಿಯುವುದಿಲ್ಲ. ಹೀಗಿದ್ದಾಗ, ನಿಮ್ಮ ವಿಡಿಯೋ ಮುಂದೆ ಮಹತ್ವದ ಸಾಕ್ಷ್ಯವಾಗಿರಲಿದೆ. ಇದು ದೇಶಕ್ಕೆ ನೀವು ನೀಡುವ ಉತ್ತಮ ಕೊಡುಗೆಯಾಗಿರಲಿದೆ ಎಂದಿದ್ದಾರೆ.