ಕರ್ನಾಟಕ

karnataka

ETV Bharat / city

ಸಚಿವ ಅಶ್ವತ್ಥ್ ನಾರಾಯಣ್ ಭ್ರಷ್ಟಾಚಾರದ ವಿಶ್ವಮಾನವ: ಡಿಕೆಶಿ

ರಾಮನಗರ ಉಸ್ತವಾರಿ ಸಚಿವ ಅಶ್ವತ್ಥ್ ನಾರಾಯಣ್ ಭ್ರಷ್ಟಾಚಾರದ ವಿಶ್ವಮಾನವ. ಅಸಿಸ್ಟೆಂಟ್ ಪ್ರೊಫೆಸರ್ ಹಗರಣ ಹೇಗಾಯ್ತು?. ಅದಕ್ಕೆ ಜಬಾಬ್ದಾರಿ ಯಾರು? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್

By

Published : May 5, 2022, 2:13 PM IST

ಬೆಂಗಳೂರು: ಸಚಿವ ಅಶ್ವತ್ಥ್ ನಾರಾಯಣ್ ಭ್ರಷ್ಟಾಚಾರದ ವಿಶ್ವ ಮಾನವ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು. ಸದಾಶಿವ ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಅಶ್ವತ್ಥ್ ನಾರಾಯಣ್ ಸಂಪರ್ಕದಲ್ಲಿರುವ ಸಂಸ್ಥೆಗಳಲ್ಲಿ ಇದೆಲ್ಲಾ ಆಗ್ತಿದೆ. ಅನೇಕ ಯುವಕರು ಉದ್ಯೋಗಕ್ಕಾಗಿ ಅರ್ಜಿ ಹಾಕಿದ್ರು. ಅವರ ಭವಿಷ್ಯ ಈಗ ಸಮಸ್ಯೆಯಲ್ಲಿದೆ. ಅಶ್ವತ್ಥ್ ನಾರಾಯಣ್ ರಾಮನಗರ ಉಸ್ತವಾರಿ ಸಚಿವ, ಅದೇನೋ ಕ್ಲೀನ್ ಮಾಡಿದ್ರಲ್ಲಪ್ಪ. ಏನ್ ಕ್ಲೀನ್ ಮಾಡಿದರು?. ಅಸಿಸ್ಟೆಂಟ್ ಪ್ರೊಫೆಸರ್ ಹಗರಣ ಹೇಗಾಯ್ತು?. ಅದಕ್ಕೆ ಜಬಾಬ್ದಾರಿ ಯಾರು? ಎಂದು ಪ್ರಶ್ನಿಸಿದರು.

ಪ್ರಿಯಾಂಕ್ ಖರ್ಗೆಗೆ ನೋಟಿಸ್ ವಿಚಾರವಾಗಿ ಮಾತನಾಡಿದ ಅವರು, ಪೊಲೀಸರು ಬಹಳ ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಯಾರು ಆರೋಪಿಸ್ತಾರೆ ಅವರಿಗೆ ನೋಟಿಸ್ ಕೊಡ್ತಾರೆ‌. ಒಳ್ಳೆಯ ಸಂಪ್ರದಾಯ ಶುರು ಮಾಡಿದಕ್ಕೆ ಅಭಿನಂದನೆ. ಅದೇ ರೀತಿ ಯತ್ನಾಳ್​ ಅವರಿಗೂ ಕೊಡಬೇಕಲ್ಲ, ಅವರ ಪಕ್ಷದವರಿಗೂ ನೋಟಿಸ್ ಕೊಡಬೇಕು. ಪ್ರಿಯಾಂಕ್ ನಮ್ಮ ವಕ್ತಾರರು. ಈ ವಿಚಾರ ಮಾತನಾಡಲು ಅಧಿಕಾರ ಕೊಟ್ಟಿದ್ದೇವೆ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಗೃಹ ಸಚಿವರು ಸದನದಲ್ಲಿ ಏನು ಆಗಿಲ್ಲ ಅಂತಾರೆ. ಆದರೆ ಅರೆಸ್ಟ್ ಮಾಡ್ತಿರೋದು ಯಾಕೆ?. ಯಾರು ಆರೋಪಿ ಎಂಬುದನ್ನ ಗೌಪ್ಯವಾಗಿ ಇಡ್ತಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ದಲಿತ ನಾಯಕನಿಗೆ ದೌರ್ಜನ್ಯ ಮಾಡುತ್ತಿದ್ದಾರೆ. ಬಾಯಿ ಮುಚ್ಚಿಸಲು ಪ್ರಯತ್ನ ಮಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರನ್ನು ಯಾವಾಗ ಕಳಿಸಬೇಕು. ಏನು ಕೊಟ್ಟು ಕಳಿಸಬೇಕು ಅಂತ ನಮಗೆ ಗೊತ್ತಿದೆ. ಅದರ ಬಗ್ಗೆ ಪಕ್ಷ ನಿರ್ಧಾರ ಮಾಡುತ್ತದೆ ಎಂದರು.

ಇದನ್ನೂ ಓದಿ:ಪಿಎಸ್‌ಐ ಪರೀಕ್ಷೆ ಅಕ್ರಮ: ಕಾಂಗ್ರೆಸ್​ ಹಿಟ್ ಆ್ಯಂಡ್ ರನ್ ಮಾಡ್ತಿದೆ ಎಂದ ಸಿಎಂ

ABOUT THE AUTHOR

...view details