ಬೆಂಗಳೂರು:ಉತ್ತರ ಕರ್ನಾಟಕದ ಮಿರ್ಚಿ ಮಂಡಕ್ಕಿಯಲ್ಲಿ ಉಪ್ಪು,ಖಾರ ಇರುತ್ತೆ. ಈ ಬಜೆಟ್‌ನಲ್ಲಿ ಖಾರನೂ ಇಲ್ಲ, ಶಕ್ತಿನೂ ಇಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಈ ಬಜೆಟ್‌ನಲ್ಲಿ ಖಾರನೂ ಇಲ್ಲ, ಶಕ್ತಿನೂ ಇಲ್ಲ: ಡಿ.ಕೆ.ಶಿವಕುಮಾರ್ ವ್ಯಂಗ್ಯ - ಹಳೆ ಯೋಜನೆಗಳ ಹೆಸರನ್ನ ತೆಗೆದು ಹೊಸ ಹೆಸರನ್ನ ನಮೂದನೆ
ಉತ್ತರ ಕರ್ನಾಟಕದ ಮಿರ್ಚಿ ಮಂಡಕ್ಕಿಯಲ್ಲಿ ಉಪ್ಪು-ಖಾರ ಇರುತ್ತೆ. ಈ ಬಜೆಟ್‌ನಲ್ಲಿ ಖಾರನೂ ಇಲ್ಲ, ಶಕ್ತಿನೂ ಇಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಈ ಬಜೆಟ್‌ನಲ್ಲಿ ಖಾರಾನು ಇಲ್ಲ ಶಕ್ತಿನೂ ಇಲ್ಲ: ಡಿಕೆಶಿ ವ್ಯಂಗ್ಯ
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹುರುಪಿನಲ್ಲಿ ಸರ್ಕಾರ ಮಾಡಿದ್ರು, ಅದರಂತೆ ಬಜೆಟ್ ಇಲ್ಲ. ಅವರಲ್ಲಿ ಶಕ್ತಿ ಇಲ್ಲದಾಗಿದೆ. ಇದು ದಿಕ್ಕು ದೆಸೆಯಿಲ್ಲದ ಬಜೆಟ್. ನನ್ನ ಕೈಲಿ ಒಳ್ಳೆ ಬಜೆಟ್ ಮಾಡೋಕೆ ಆಗಿಲ್ಲ, ಜಿಎಸ್‌ಟಿ ಫೇಲ್ ಆಗಿದೆ ಎಂದು ಅವರ ಪುಸ್ತಕದಲ್ಲೆ ಬರೆದುಕೊಂಡಿದ್ದಾರೆ. ಕೇಂದ್ರ ಸರ್ಕಾರದ ದೌರ್ಬಲ್ಯ ಬಜೆಟ್ ಅಂದುಕೊಂಡಿದ್ದೆ. ಅದಕ್ಕಿಂತ ದುರ್ಬಲ ಬಜೆಟ್ ರಾಜ್ಯ ಸರ್ಕಾರದ್ದು ಎಂದು ಟೀಕಿಸಿದರು.