ಕರ್ನಾಟಕ

karnataka

ETV Bharat / city

ಸಾಕ್ಷ್ಯ ನಾಶ ಪ್ರಕರಣ...ಡಿಕೆಶಿ ಯಿಂದ ಆಕ್ಷೇಪಣೆ ಸಲ್ಲಿಕೆ - ಸಾಕ್ಷ್ಯ ನಾಶ

ಸಾಕ್ಷ್ಯ ನಾಶ ಮಾಡಿದ್ದೇನೆಂದು ಐಟಿ ಅಧಿಕಾರಿಗಳು ಪೂರ್ವಗ್ರಹ ಪೀಡಿತರಾಗಿ ಪ್ರಕರಣ ದಾಖಲು ಮಾಡಿದ್ದಾರೆ ಎಂದು ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ಜನಪ್ರತಿನಿಧಿ ವಿಶೇಷ ನ್ಯಾಯಾಲಯದಲ್ಲಿ ಡಿಕೆಶಿ ಅರ್ಜಿ ಸಲ್ಲಿಸಿದ್ದಾರೆ.

ಡಿ.ಕೆ. ಶಿವಕುಮಾರ್

By

Published : Feb 4, 2019, 3:31 PM IST

ಬೆಂಗಳೂರು: ಐಟಿ ದಾಳಿ ವೇಳೆ ‌ಡಿ.ಕೆ. ಶಿವಕುಮಾರ್ ಸಾಕ್ಷ್ಯ ನಾಶ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶವನ್ನೇ ಮಾಡಿಲ್ಲ, ಸಾಕ್ಷ್ಯ ನಾಶ ಮಾಡಿದ್ರೆ ಪದೇ ಪದೇ ವಿಚಾರಣೆಗೆ ಯಾಕೆ ಹಾಜರಾಗುತ್ತಿದ್ದೆ ಎಂದು ಡಿಕೆಶಿ ತಿಳಿಸಿದ್ದಾರೆ.

ಐಟಿ ಅಧಿಕಾರಿಗಳು ಇದನ್ನು ಪೂರ್ವಗ್ರಹ ಪೀಡಿತರಾಗಿ ಪ್ರಕರಣ ದಾಖಲು ಮಾಡಿದ್ದಾರೆ. ಸಾಕ್ಷ್ಯ ನಾಶವನ್ನೇ ಮಾಡದೇ ಆರೋಪಿ ಹೇಗೆ ಆಗ್ತೀನಿ ಎಂದು ಪ್ರಶ್ನೆ ಮಾಡಿ ಜನಪ್ರತಿನಿಧಿ ವಿಶೇಷ ನ್ಯಾಯಾಲಯದಲ್ಲಿ ಡಿಕೆಶಿ ಅರ್ಜಿ ಹಾಕಿದ್ದಾರೆ.

ಇನ್ನು ಐಟಿ ಡಿಕೆಶಿ ಆಕ್ಷೇಪಣೆಗೆ ಮರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೇಳಿದೆ. ಈ ಹಿನ್ನೆಲೆ ಜನಪ್ರತಿನಿಧಿ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಕಾಲಾವಕಾಶ ನೀಡಿ ನ್ಯಾಯಾಲಯ ವಿಚಾರಣೆ ಮುಂದೂಡಿದೆ.

ಆದಾಯ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಕಳೆದ ವರ್ಷ ಈಗಲ್​ಟನ್ ರೆಸಾರ್ಟ್ ಮೇಲೆ ಐಟಿ ದಾಳಿ ನಡೆಸಿತ್ತು. ದಾಳಿ ವೇಳೆ ತನ್ನ ಬಳಿಯಿದ್ದ ಚೀಟಿಗಳನ್ನ ಹರಿದಿದ್ದಾರೆ ಎಂಬ ಆರೋಪ ಸಚಿವ ಡಿ‌ಕೆ ಶಿವಕುಮಾರ್ ಮೇಲಿದೆ.

ABOUT THE AUTHOR

...view details