ಕರ್ನಾಟಕ

karnataka

ETV Bharat / city

ಸಾಮರಸ್ಯವೇ ಭಾರತದ ಬಹುದೊಡ್ಡ ಆಸ್ತಿ: ಡಿಕೆಶಿ - DK Shivakumar participated in the Ramadan mass prayer and basava jayanthi program

ರಂಜಾನ್ ಹಬ್ಬದ ಪ್ರಯುಕ್ತ ಬೆಂಗಳೂರಿನ ಮಿಲ್ಲರ್ಸ್ ರಸ್ತೆಯ ಇ ಖಾದ್ರಿಯ ಮಸೀದಿಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಾಲ್ಗೊಂಡರು. ಬಳಿಕ ಬಸವ ಜಯಂತಿ ಪ್ರಯುಕ್ತ ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದ್ದಾರೆ.

dk-shivakumar-participated-in-the-ramadan-mass-prayer-and-basava-jayanthi-program
ಸಾಮರಸ್ಯವೇ ಭಾರತದ ಬಹುದೊಡ್ಡ ಆಸ್ತಿ: ಡಿಕೆಶಿ

By

Published : May 3, 2022, 1:37 PM IST

ಬೆಂಗಳೂರು: ರಂಜಾನ್ ಹಬ್ಬದ ಪ್ರಯುಕ್ತ ಬೆಂಗಳೂರಿನ ಮಿಲ್ಲರ್ಸ್ ರಸ್ತೆಯ ಇ ಖಾದ್ರಿಯ ಮಸೀದಿಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಡಿ.ಕೆ.ಶಿವಕುಮಾರ್ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕ ರಿಜ್ವಾನ್ ಅರ್ಶದ್ ಮತ್ತಿತರರು ಇದ್ದರು.

ಬಳಿಕ ಮಾತನಾಡಿದ ಡಿಕೆಶಿ, ಇಂದು ಅತ್ಯಂತ ಪವಿತ್ರವಾದ ದಿನ. ಈ ಸಮಾಜ ಶಾಂತಿಗೋಸ್ಕರ ಪ್ರಾರ್ಥನೆ ಮಾಡಿದ್ದಾರೆ. ಇಂದೇ ಬಸವಣ್ಣನ ಜಯಂತಿ ಕೂಡಾ ಇದೆ. ಸಾಮರಸ್ಯವೇ ಭಾರತದ ಬಹುದೊಡ್ಡ ಆಸ್ತಿ. ನಾನು ಎಲ್ಲರಿಗೂ ಈದ್ ಶುಭಾಶಯ ತಿಳಿಸಿದ್ದೇನೆ. ನಾವು ನಿಮ್ಮೊಂದಿಗೆ ಇದ್ದೇವೆ. ನೀವು ಅನುಭವಿಸುತ್ತಿರುವ ನೋವಿಗೆ ನಮಗೂ ದುಃಖವಾಗುತ್ತಿದೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಹುಡುಕಾಟ ನಡೆಸಿದ್ದೇವೆ. ನಿಮಗೆ ಶಕ್ತಿ ತುಂಬುವ ಕಾರ್ಯ ಮಾಡುತ್ತೇವೆ. ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿದ್ದಾರೆ.


ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ: ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣನವರ ಪ್ರತಿಮೆಗೆ ಡಿಕೆಶಿ ಮಾಲಾರ್ಪಣೆ ಮಾಡಿದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಬಸವಣ್ಣನವರ ಸಿದ್ಧಾಂತವೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ. ರಂಜಾನ್ ಹಾಗೂ ಬಸವ ಜಯಂತಿ ಒಟ್ಟಾಗಿ ಆಚರಿಸುತ್ತಿದ್ದೇವೆ. ಎಲ್ಲಾ ಧರ್ಮಗಳ ಆಚರಣೆಗೆ ಗೌರವ ಕೊಡಬೇಕು. ಅವರ ಆಚಾರ ವಿಚಾರಕ್ಕೆ ಬೆಂಬಲ ನೀಡಬೇಕು. ಸಾಮಾಜಿಕ ಸಾಮರಸ್ಯಕ್ಕೆ ಇದು ದಾರಿದೀಪ. ಇದನ್ನು ನಾವು ಅರಿಯಬೇಕು. ನಮ್ಮ ಪಕ್ಷದ ಕಾರ್ಯಕರ್ತರು, ನಾಯಕರು ಬಸವಣ್ಣನಿಗೆ ನಮಿಸುವ ಕಾರ್ಯ ಮಾಡಿದ್ದೇವೆ ಎಂದು ಹೇಳಿದರು.

ಇದನ್ನೂಓದಿ :ಸಿಎಂ ಆಗಿ ಬೊಮ್ಮಾಯಿ ಮುಂದುವರೆಯಲಿದ್ದಾರೆ; ನಾಯಕತ್ವ ಬದಲಾವಣೆ ಕಪೋಲಕಲ್ಪಿತ'

ABOUT THE AUTHOR

...view details