ಕರ್ನಾಟಕ

karnataka

ETV Bharat / city

ಬೆಂಗಳೂರು ಜನತೆಯ ಕ್ಷಮೆ ಯಾಚಿಸಿದ ಡಿಕೆಶಿ... ಯಾಕೆ ಗೊತ್ತಾ?

ಮಹಾನಗರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ನಡೆಯಲಿದ್ದು, ವಾರದ ದಿನವಾದ ಹಿನ್ನೆಲೆ ಸಂಚಾರದಟ್ಟಣೆ ಉಂಟಾಗಲಿದೆ. ಇದರಿಂದ ಜನತೆಗೆ ಸಮಸ್ಯೆ ಉಂಟಾಗಲಿದ್ದು, ಈ ಸಮಸ್ಯೆ ಹಿನ್ನೆಲೆ ನಗರದ ಜನತೆಯಲ್ಲಿ ಡಿಕೆಶಿ ಕ್ಷಮೆ ಕೋರಿದ್ದಾರೆ.

By

Published : Mar 1, 2022, 10:48 AM IST

Updated : Mar 1, 2022, 11:19 AM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಸಮಸ್ತ ಜನತೆಗೆ ಶಿವರಾತ್ರಿ ಹಬ್ಬದ ಶುಭಾಶಯ ಕೋರಿದ್ದಾರೆ. ಜೊತೆಗೆ ಬೆಂಗಳೂರಿಗರ ಕ್ಷಮೆಯಾಚಿಸಿದ್ದಾರೆ.

ಮಹಾನಗರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ನಡೆಯಲಿದ್ದು, ವಾರದ ದಿನವಾದ ಹಿನ್ನೆಲೆ ಸಂಚಾರದಟ್ಟಣೆ ಉಂಟಾಗಲಿದೆ. ಇದರಿಂದ ಜನತೆಗೆ ಸಮಸ್ಯೆ ಉಂಟಾಗಲಿದ್ದು, ಈ ಸಮಸ್ಯೆ ಹಿನ್ನೆಲೆ ನಗರದ ಜನತೆಯಲ್ಲಿ ಡಿಕೆಶಿ ಕ್ಷಮೆ ಕೋರಿದ್ದಾರೆ. ಮೂರು ದಿನದ ಟ್ರಾಫಿಕ್ ಜಾಮ್ ಸಹಿಸಿಕೊಂಡರೆ ಮುಂದಿನ 30 ವರ್ಷ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಆದ್ದರಿಂದ ನಮಗೆ ಸಹಕಾರ ನೀಡಿ ಎಂದು ವಿಡಿಯೋ ಮೂಲಕ ಡಿಕೆಶಿ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರು ಜನತೆಯ ಕ್ಷಮೆ ಯಾಚಿಸಿದ ಡಿಕೆಶಿ

ಇಂದು ಕೆಂಗೇರಿಯ ಪೂರ್ಣಿಮಾ ಸಮುದಾಯಭವನದಿಂದ ಬಿಟಿಎಂ ಲೇಔಟ್​ನ ಅದ್ವೈತ ಪೆಟ್ರೋಲ್ ಬಂಕ್​ವರೆಗೂ ಪಾದ ಯಾತ್ರೆ ಸಾಗಲಿದೆ. ನಾಳೆ ಅದ್ವೈತ ಪೆಟ್ರೋಲ್ ಬಂಕ್​ನಿಂದ ಅರಮನೆ ಮೈದಾನದವರೆಗೆ ಪಾದಯಾತ್ರೆ ಸಾಗಲಿದೆ. ಮೂರನೇ ಹಾಗೂ ಕಡೆಯ ದಿನ ಅರಮನೆ ಮೈದಾನದಿಂದ ಬಸವನಗುಡಿ ನ್ಯಾಷನಲ್ ಕಾಲೇಜ್​ವರೆಗೂ ಪಾದ ಯಾತ್ರೆ ಸಾಗಲಿದೆ.

ಬುಧವಾರದಿಂದ ಶುಕ್ರವಾರದವರೆಗೂ ನಡೆಯುವ ಪಾದಯಾತ್ರೆ ಸಾಕಷ್ಟು ಕಡೆಗಳಲ್ಲಿ ಸಂಚಾರದಟ್ಟಣೆ ಸೃಷ್ಟಿಸಲಿದೆ. ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡು ಶಕ್ತಿ ಪ್ರದರ್ಶನ ನಡೆಸುವ ಹಿನ್ನೆಲೆ ಸಹಜವಾಗಿಯೇ ನಗರದಲ್ಲಿ ಸಮಸ್ಯೆ ಉಂಟಾಗಲಿದೆ.

Last Updated : Mar 1, 2022, 11:19 AM IST

ABOUT THE AUTHOR

...view details