ಬೆಂಗಳೂರು: 'ರಾಜ್ಯ ಗೃಹ ಸಚಿವರು ಜ್ಞಾನವಿಲ್ಲದ ಅರಗದ ಜ್ಞಾನೇಂದ್ರ' ಎಂದು ಕೆಪಿಸಿಪಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿ ಕಾರಿದರು. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಒಬ್ಬ ಹೋಂ ಮಿನಿಸ್ಟರ್ಗೆ ಬೇಸಿಕ್ ನಾಲೆಡ್ಜ್ ಇಲ್ಲ. ಅವರು ಯಾರ ಪರ ಮಾತನಾಡುತ್ತಿದ್ದಾರೆ. ಸರ್ಕಾರದ ಪರವಾಗಿ ಮಾತನಾಡುತ್ತಿದ್ದಾರಾ?. ಇಲ್ಲಾ ರಾಜ್ಯದ ಜನರ ಪರ ಮಾತನಾಡುತ್ತಿದ್ದಾರಾ?. ಹೋಗ್ಲಿ ಅವರ ಪಕ್ಷದ ಪರವಾಗಿ ಮಾತನಾಡುತ್ತಿದ್ದಾರಾ ಅನ್ನೋದು ಗೊತ್ತಿಲ್ಲ ಎಂದರು.
ನಾನು ಡಿಜಿ, ಆಯುಕ್ತರಿಗೆ ಮನವಿ ಮಾಡುತ್ತೇನೆ. ಮೊದಲು ನಿಮ್ಮ ಗೃಹ ಸಚಿವರ ವಿರುದ್ಧ ದೂರು ದಾಖಲಿಸಿ. ನಾವು ಕೊಲೆಯನ್ನು ಖಂಡಿಸುತ್ತೇವೆ. ಆದರೆ ಸಾವನ್ನು ಪ್ರಚೋದಿಸುವುದು ಎಷ್ಟು ಸರಿ? ಪ್ರಚೋದನೆ ಹೇಳಿಕೆ ಕೊಟ್ಟು ವೈಷಮ್ಯ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು.