ಬೆಂಗಳೂರು:ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಕ್ಕನ ಮಗ ನವೀನ್ ಮನೆಗೆ ಬೆಂಕಿ ಇಟ್ಟ ಪ್ರಮುಖ ಆರೋಪಿಯನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಡಿಜೆ ಹಳ್ಳಿಯ ಯೂಸುಫ್ ಬಂಧಿತ ಆರೋಪಿ. ಈತನನ್ನು ಬಂಧಿಸಿ ವಿಚಾರಣೆಗೆ ಠಾಣೆಗೆ ಕರೆ ತರುವ ವೇಳೆ ಮಾಧ್ಯಮಗಳ ಕ್ಯಾಮೆರಾ ಕಂಡು ಕೋಪಗೊಂಡಿದ್ದಾನೆ.

ಯೂಸುಫ್, ಫೇಸ್ಬುಕ್ ಪೋಸ್ಟ್ ವಿಚಾರಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ ಗುಂಪುಗೂಡಿ ಕಾವಲ್ ಭೈರಸಂದ್ರ ಬಳಿಯಿರುವ ನವೀನ್ ಮನೆಗೆ ಹೋಗಿದ್ದನು. ಮನೆ ಧ್ವಂಸಗೊಳಿಸಿದ ಹಾಗೂ ಜಾತಿ ನಿಂದನೆ ಆರೋಪಿಸಿ ನವೀನ್ ಕುಟುಂಬಸ್ಥರು ದೂರು ನೀಡಿದ್ದರು. ಈ ಸಂಬಂಧ ತಲೆಮರೆಸಿಕೊಂಡಿದ್ದ ಯೂಸುಫ್ನನ್ನು ಇಂದು ಬಂಧಿಸಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ನವೀನ್ ಮನೆಗೆ ನುಗ್ಗಿ ಅಟ್ಯಾಕ್ ಮಾಡಿದ್ದ ಆರೋಪಿಗಳ ಪೈಕಿ ಅರೆಸ್ಟ್ ಆದ ಮೊದಲ ವ್ಯಕ್ತಿ ಯೂಸುಫ್ ಆಗಿದ್ದಾನೆ.
ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಗಲಭೆಗೆ ಸಂಬಂಧಿಸದಂತೆ ತಡರಾತ್ರಿ ಮತ್ತೆ 30 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.