ಬೆಂಗಳೂರು: ಮತ್ತೆ ಅತೃಪ್ತ ಶಾಸಕರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ತೆಗೆದುಕೊಳ್ಳುವುದಿಲ್ಲ. ಈಗಾಗಲೇ ಸದನದಲ್ಲಿ ಸಿದ್ದರಾಮಯ್ಯನವರು ಅತೃಪ್ತರನ್ನ ಪಕ್ಷಕ್ಕೆ ತೆಗೆದುಕೊಳ್ಳುವುದಿಲ್ಲ ಅಂತ ಹೇಳಿದ್ದಾರೆ, ಇದು ಮುಗಿದ ಅಧ್ಯಾಯ ಎಂದು ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಅತೃಪ್ತ ಶಾಸಕರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ತೆಗೆದುಕೊಳ್ಳಲ್ಲ: ಸತೀಶ್ ಜಾರಕಿಹೊಳಿ - undefined
ಮತ್ತೆ ಅತೃಪ್ತ ಶಾಸಕರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ತೆಗೆದುಕೊಳ್ಳುವುದಿಲ್ಲ. ಅತೃಪ್ತರ ಕ್ಷೇತ್ರಗಳಲ್ಲಿ ಚುನಾವಣೆ ನಡೆದರೆ ಹೊಸಬರನ್ನು ಹುಡುಕಬೇಕಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
![ಅತೃಪ್ತ ಶಾಸಕರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ತೆಗೆದುಕೊಳ್ಳಲ್ಲ: ಸತೀಶ್ ಜಾರಕಿಹೊಳಿ](https://etvbharatimages.akamaized.net/etvbharat/prod-images/768-512-3943679-thumbnail-3x2-lek.jpg)
ಸತೀಶ್ ಜಾರಕಿಹೋಳಿ
ಅತೃಪ್ತ ಶಾಸಕರ ಕುರಿತು ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಅತೃಪ್ತರ ಕ್ಷೇತ್ರಗಳಲ್ಲಿ ಚುನಾವಣೆ ನಡೆದರೆ ಹೊಸಬರನ್ನ ಹುಡುಕಬೇಕಿದೆ. ಅತೃಪ್ತರು ಬಾಂಬೆಯಲ್ಲಿ ಕುಳಿತು ಮಾತನಾಡಿದ್ರೆ ಆಗುವುದಿಲ್ಲ, ಇಲ್ಲಿಗೆ ಬಂದು ಮಾತನಾಡಬಹುದಿತ್ತು. ಅಲ್ಲಿ ಕುಳಿತು ಸಿದ್ದರಾಮಯ್ಯ ನಮ್ಮ ನಾಯಕರು, ನಮಗೆ ಸಮಸ್ಯೆ ಇದೆ ಅಂದ್ರೆ ಅವರ ಬಳಿ ಏನ್ ಮಾತನಾಡೋಕೆ ಆಗುತ್ತೆ ಎಂದು ಪ್ರಶ್ನಿಸಿದರು.
ಅತೃಪ್ತರ ಅನರ್ಹತೆ ವಿಚಾರವನ್ನು ಸ್ವೀಕರ್ ನೋಡಿಕೊಳ್ತಾರೆ. ರಾಜೀನಾಮೆ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದರೆ ಮೈತ್ರಿಯಾಗಿ ಎದುರಿಸಬೇಕೋ, ಬೇಡವೋ ಅನ್ನೋದನ್ನ ನಮ್ಮ ನಾಯಕರು ನಿರ್ಧರಿಸ್ತಾರೆ ಎಂದರು.