ಬೆಂಗಳೂರು: ನಾವು ರಾಜೀನಾಮೆ ಕೊಟ್ಟಿದ್ದರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಪಕ್ಷದ ನಾಯಕರು ನಮಗೆ ಕರುಣೆ ತೋರಿಸಲಿದ್ದಾರೆ ಎಂದು ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ ಹೇಳಿದರು.
ನಾವು ರಾಜೀನಾಮೆ ಕೊಟ್ಟಿದ್ದಕ್ಕೇ ಬಿಜೆಪಿ ಅಧಿಕಾರಕ್ಕೆ ಬಂದಿದ್ದು: ಅನರ್ಹ ಶಾಸಕ - ಸಿಎಂ ಬಿಎಸ್‌ವೈ
ನಾವು ರಾಜೀನಾಮೆ ಕೊಟ್ಟಿದ್ದರಿಂದಲೇ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಿದ್ದು. ಹೀಗಾಗಿ ಪಕ್ಷದ ನಾಯಕರು ನಮಗೆ ಕರುಣೆ ತೋರಿಸಲಿದ್ದಾರೆ ಎಂದು ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ ಹೇಳಿದರು.
ಅನರ್ಹ ಶಾಸಕರಿಗೆ ಪಕ್ಷದಿಂದ ಟಿಕೆಟ್ ನೀಡಲು ತೀರ್ಮಾನ ಕೈಗೊಂಡಿಲ್ಲ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಗಲೇ ಪಕ್ಷ ಸೇರುವುದರ ಕುರಿತು ಹೇಳುವುದಿಲ್ಲ. ಈ ಬಗ್ಗೆ ಬೇರೆಯವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಅದಕ್ಕೆ ತಲೆಕೆಡಿಸಿಕೊಂಡಿಲ್ಲ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ನಮ್ಮ ಪರ ತೀರ್ಪು ಬರುವ ವಿಶ್ವಾಸವಿದೆ. ಬಳಿಕ ಯಾವ ಪಕ್ಷಕ್ಕೆ ಸೇರಬೇಕು ಎಂಬುದನ್ನು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.
ಸಿಎಂ ಬಿಎಸ್‌ವೈ ತಂತಿ ಮೇಲಿನ ನಡಿಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನೀವು ಒಂದು ಹೇಳಿಕೆಯನ್ನ ಮಾತ್ರ ನೋಡಿದ್ದೀರಿ. ಅವರು ಹೇಳಿರುವುದೇ ಬೇರೆ ನೀವು ಅರ್ಥೈಸಿಕೊಂಡಿದ್ದೇ ಬೇರೆ. ಅವರು ಎಲ್ಲ ಜಾತಿ ಜನಾಂಗಗಳನ್ನು ಒಟ್ಟಿಗೇ ತೆಗೆದುಕೊಂಡು ಹೋಗುವ ಪ್ರಯತ್ನ ಅಷ್ಟೇ. ಮಾಧ್ಯಮಗಳು ಅದರಲ್ಲಿ ಒಂದು ಮಾತ್ರ ಹಾಕಿದ್ದೀರಿ ಎಂದು ಸ್ಪಷ್ಟಪಡಿಸಿದರು.