ಕರ್ನಾಟಕ

karnataka

ETV Bharat / city

ಕೈಗಾರಿಕೆಗಳಿಗೆ ವಿದ್ಯುತ್ ದರದಲ್ಲಿ ರಿಯಾಯಿತಿ: ಸಂತಸ ವ್ಯಕ್ತಪಡಿಸಿದ ಕಾಸಿಯಾ

ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಮಾಸಿಕ ಇಂಧನ ಬಳಕೆಯಲ್ಲಿ ಪ್ರತಿ ಯೂನಿಟ್​ಗೆ 50 ಪೈಸೆ ರಿಯಾಯಿತಿ ನೀಡಿರುವುದಕ್ಕೆ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸಂಘ ಸಂತಸ ವ್ಯಕ್ತಪಡಿಸಿದೆ.

ಕಾಸಿಯಾ
ಕಾಸಿಯಾ

By

Published : Apr 6, 2022, 7:35 AM IST

ಬೆಂಗಳೂರು: ರಾಜ್ಯದ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆ.ಆರ್.ಸಿ) ಹೊರಡಿಸಿದ ಇತ್ತೀಚಿನ ಆದೇಶದ ಪ್ರಕಾರ, ಕೋವಿಡ್ ಸಾಂಕ್ರಾಮಿಕದ ದುಷ್ಪರಿಣಾಮಗಳಿಂದ ಚೇತರಿಸಿಕೊಳ್ಳಲು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಮಾಸಿಕ ಇಂಧನ ಬಳಕೆಯಲ್ಲಿನ ಪ್ರತಿ ಯೂನಿಟ್​ಗೆ 50 ಪೈಸೆ ರಿಯಾಯಿತಿ ನೀಡಿರುವುದಕ್ಕೆ ಕಾಸಿಯಾ ಸಂತಸ ವ್ಯಕ್ತಪಡಿಸಿದೆ.

ಮಂಜುಗಡ್ಡೆ ಉತ್ಪಾದನಾ ಮತ್ತು ಶೀತಲೀಕರಣ ಘಟಕಗಳಿಗೆ ನೀಡಲಾದ ಕೆಲವು ರಿಯಾಯಿತಿಗಳನ್ನು ಮತ್ತು 2023ರ ಹಣಕಾಸಿನ ವರ್ಷದಲ್ಲಿ ಮೂಲ ಬಳಕೆಗಿಂತ ಹೆಚ್ಚಿನ ವಿದ್ಯುತ್ ಬಳಕೆಗಾಗಿ ಹೆಚ್-2 ವರ್ಗಗಳಿಗೆ ಪ್ರತಿ ಯೂನಿಟ್‌ಗೆ 6 ರೂ. ರಿಯಾಯಿತಿ ಇಂಧನ ದರ ಯೋಜನೆಯನ್ನು ಮುಂದುವರಿಸಿರುವುದನ್ನು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸಂಘದ ಆಡಳಿತಾಧಿಕಾರಿ ಕೆ. ಶಶಿಧರ್ ಸ್ವಾಗತಿಸಿದ್ದಾರೆ.

ಕಾಸಿಯಾ

ಇದನ್ನೂ ಓದಿ:ಸಣ್ಣ ಕೈಗಾರಿಕೆಗಳಿಗೆ ವಿದ್ಯುತ್ ದರ ಹೆಚ್ಚಿಸಬೇಡಿ: ಸರ್ಕಾರಕ್ಕೆ ಕಾಸಿಯಾ ಒತ್ತಾಯ

ABOUT THE AUTHOR

...view details