ಕರ್ನಾಟಕ

karnataka

ETV Bharat / city

ಬಿಜೆಪಿ ನಾಯಕರು ಈಗೇನು ಬಾಯಿಗೆ ಕಡುಬು ತುರುಕಿಕೊಂಡಿದ್ದಾರೆಯೇ? ದಿನೇಶ್ ಗುಂಡೂರಾವ್ ಟ್ವೀಟಾಸ್ತ್ರ - ದಿನೇಶ್ ಗುಂಡೂರಾವ್ ಆಕ್ರೋಶ

ಕೇಂದ್ರ ಸರ್ಕಾರದ ದುರಾಡಳಿತದಿಂದ ಇಂದು ಜನ ಹಿಡಿಶಾಪ ಹಾಕಿಕೊಂಡು ತಿರುಗಾಡುತ್ತಿದ್ದಾರೆ. ಇದೇನಾ ಬಿಜೆಪಿಯವರು ಹೇಳುತ್ತಿದ್ದ ಅಚ್ಛೇ ದಿನ್? ಎಂದು ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ಧಾರೆ.

Dinesh Gundurao
ದಿನೇಶ್ ಗುಂಡೂರಾವ್

By

Published : Feb 13, 2021, 11:40 AM IST

ಬೆಂಗಳೂರು:ಇಂಧನ ಬೆಲೆ ಗಗನಕ್ಕೇರಿದ್ದರೂ ಬಿಜೆಪಿ ಪಕ್ಷ ಬಾಯಿ ಮುಚ್ಚಿ ಕುಳಿತಿದೆ. ಅವರು ದನಿಯೆತ್ತಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿರುವ ಅವರು, ನಮ್ಮ ಯುಪಿಎ ಆಡಳಿತಾವಧಿಯಲ್ಲಿ ತೈಲ ಬೆಲೆ ಒಂದೇ ಒಂದು ಪೈಸೆ ಏರಿಕೆಯಾದರೂ ಹಾದಿ ರಂಪ - ಬೀದಿ ರಂಪ ಮಾಡುತ್ತಿದ್ದ ಬಿಜೆಪಿ ನಾಯಕರು ಈಗೇನು ಬಾಯಿಗೆ ಕಡುಬು ತುರುಕಿಕೊಂಡಿದ್ದಾರೆಯೇ? ತೈಲ ಬೆಲೆ ಈಗ ಶತಕದ ಸಮೀಪ ಬಂದಿದೆ. ಹಿಂದೆಲ್ಲಾ ತೈಲ ಬೆಲೆ ಏರಿಕೆಯಾದಾಗ ಉತ್ತರ ಕುಮಾರನ ಪೌರುಷ ತೋರಿಸುತ್ತಿದ್ದ ಬಿಜೆಪಿಯವರು ಈಗ ಯಾವ ಬಿಲದಲ್ಲಿ ಅಡಗಿಕೊಂಡಿದ್ದಾರೆ? ಎಂದು ಕೇಳಿದ್ದಾರೆ.

ಸಿ. ಟಿ. ರವಿಯವರು ತೈಲವನ್ನು ಅಗ್ಗದ ದರದಲ್ಲಿ ಕೊಡಲು ಕೊಲ್ಲಿ ರಾಷ್ಟ್ರಗಳಲ್ಲಿ ನಮ್ಮ ಸಂಬಂಧಿಕರಿಲ್ಲ ಎಂದು ಈ ಹಿಂದೆ ಹೇಳಿದ್ದರು. ನಮ್ಮ ಸರ್ಕಾರವಿದ್ದಾಗ ತೈಲವನ್ನು ಅಗ್ಗದ ದರದಲ್ಲಿ ಕೊಡಲು ಕೊಲ್ಲಿ ರಾಷ್ಟ್ರಗಳಲ್ಲಿ ಸಿ.ಟಿ. ರವಿ ಅವರ ಸೋದರ ಮಾವ ಇದ್ರೇ? ನಮ್ಮ ಸರ್ಕಾರವಿದ್ದಾಗ ಕಚ್ಚಾ ತೈಲದ ಬೆಲೆ ಎಷ್ಟಿತ್ತು‌‌? ಈಗ ಎಷ್ಟಿದೆ ಎಂದು ಹೇಳಲಿ ಎಂದಿದ್ದಾರೆ.

ಕೇಂದ್ರ ಸರ್ಕಾರದ ದುರಾಡಳಿತದಿಂದ ಇಂದು ಜನ ಹಿಡಿಶಾಪ ಹಾಕಿಕೊಂಡು ತಿರುಗಾಡುತ್ತಿದ್ದಾರೆ. ಕೇವಲ ತೈಲ ಬೆಲೆಯಷ್ಟೇ ಅಲ್ಲ, ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿ ಜನ ತಮ್ಮ ಜೀವನ ಸಾಗಿಸುವುದೇ ದುಸ್ತರವಾಗಿದೆ. ಇದೇನಾ ಬಿಜೆಪಿ ಯವರು ಹೇಳುತ್ತಿದ್ದ ಅಚ್ಛೇ ದಿನ್? ಆತ್ಮಸಾಕ್ಷಿಯನ್ನೇ ಆತ್ಮಹತ್ಯೆ ಮಾಡಿಸಿಕೊಂಡಿರುವ ಬಿಜೆಪಿಯವರಿಂದ ಜನರ ಉದ್ಧಾರ ಸಾಧ್ಯವೆ? ಎಂದು ಲೇವಡಿ ಮಾಡಿದ್ದಾರೆ.

ABOUT THE AUTHOR

...view details