ಕರ್ನಾಟಕ

karnataka

ETV Bharat / city

ಸಗಟು, ಚಿಲ್ಲರೆ ಪೂರೈಕೆದಾರರಿಂದ ಡೀಸೆಲ್ ಬಂದ್.. ಬಿಎಂಟಿಸಿ ಬಸ್​ಗಳ ಸಂಚಾರದಲ್ಲಿ ವ್ಯತ್ಯಯ

ಸಗಟು, ಚಿಲ್ಲರೆ ಪೂರೈಕೆದಾರರಿಂದ ಡೀಸೆಲ್ ಪೂರೈಸುವುದು ಬಂದ್ ಆದ ಕಾರಣ ಬಿಎಂಟಿಸಿ ಬಸ್​ಗಳ ಸಂಚಾರದಲ್ಲಿ ವ್ಯತ್ಯಯ ಕಂಡು ಬಂದಿದೆ.

Variable in BMTC bus transport system, Diesel supply issue, BMTC bus transport news, ಬಿಎಂಟಿಸಿ ಬಸ್ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಾಸ, ಡೀಸೆಲ್ ಪೂರೈಕೆ ಸಮಸ್ಯೆ, ಬಿಎಂಟಿಸಿ ಬಸ್ ಸಾರಿಗೆ ಸುದ್ದಿ,
ಬಿಎಂಟಿಸಿ ಬಸ್​ಗಳ ಸಂಚಾರ ವ್ಯತ್ಯಯ

By

Published : Jun 27, 2022, 1:17 PM IST

Updated : Jun 27, 2022, 1:27 PM IST

ಬೆಂಗಳೂರು: ಕಳೆದ ಎರಡು ದಿನಗಳಿಂದ ಬಸ್ ಡಿಪೋಗಳಲ್ಲಿ ಡೀಸೆಲ್ ಕೊರತೆ ಎದುರಾಗಿದೆ. ಆದ್ದರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಲಾಗುತ್ತಿದೆ.

ಕಳೆದ ಎರಡು ದಿನಗಳಿಂದ ಡಿಪೋಗಳಲ್ಲಿ ಡೀಸೆಲ್ ಕೊರತೆ ಕಂಡು ಬಂದಿದೆ. ಆದರೆ ಇಂದು ಬಹುತೇಕ ಡಿಪೋಗಳಲ್ಲಿ ಡೀಸೆಲ್ ಖಾಲಿ ಆಗುವ ಸಾಧ್ಯತೆ ಇದೆ. ಸಗಟು ಖರೀದಿ ದರದಿಂದ ತತ್ತರಿಸಿ ಹೋಗಿದ್ದೇವೆ. ಸದ್ಯಕ್ಕೆ ಚಿಲ್ಲರೆ ವ್ಯಾಪಾರಿಗಳಿಂದ ನಿಗಮ ಡೀಸೆಲ್ ಖರೀದಿಸುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಓದಿ:ಬಿಎಂಟಿಸಿ ಫೀಡರ್ ಬಸ್​​ನಿಂದ ಬರುತ್ತಿಲ್ಲ ಆದಾಯ

ಮೂರು ದಿನಗಳಿಂದ ಚಿಲ್ಲರೆ ವ್ಯಾಪಾರಿಗಳಿಂದಲೂ ಡೀಸೆಲ್ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಬಿಎಂಟಿಸಿ ಡಿಪೋಗಳಲ್ಲಿ ಭಾರಿ ಪ್ರಮಾಣದ ಡೀಸೆಲ್ ಕೊರತೆ ಎದುರಾಗಿದ್ದು, ಬಿಎಂಟಿಸಿ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದಿದ್ದಾರೆ.

Last Updated : Jun 27, 2022, 1:27 PM IST

ABOUT THE AUTHOR

...view details