ಬೆಂಗಳೂರು:ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ 13ನೇ ದಿನವೂ ಮುಂದುವರೆದಿದ್ದು, ಸರ್ಕಾರಿ ಬಸ್ಗಳ ಮೇಲೆ ಕಲ್ಲುತೂರಾಟಗಳು ನಡೆಯುತ್ತಿರುವ ಆರೋಪದಡಿ ಸದ್ಯ ಎಫ್ಐಆರ್ ದಾಖಲು ಮಾಡಲಾಗಿದೆ.
ಇಲ್ಲಿ ತನಕ 174 ಜನರ ಮೇಲೆ ಎಫ್ಐಆರ್ ದಾಖಲು ಮಾಡಿದ್ದರೆ, 411 ಸಿಬ್ಬಂದಿ ಭಾಗಿಯಾಗಿದ್ದಾರೆ. ಇದರಲ್ಲಿ 95 ಜನರನ್ನ ಬಂಧಿಸಲಾಗಿದ್ದು, 109 ಬಸ್ಸುಗಳಿಗೆ ಹಾನಿಯಾಗಿದೆ. ಇಂದು ಮಧ್ಯಾಹ್ನ 1 ಗಂಟೆಯವರೆಗೆ ಕೆಎಸ್ಆರ್ಟಿಸಿ 2,267, ಬಿಎಂಟಿಸಿಯ 786, ಎನ್ಇಕೆಆರ್ಟಿಸಿ- 813, ಎನ್ಡಬ್ಲ್ಯೂಕೆಆರ್ಟಿಸಿ 812 ಬಸ್ಗಳು ಸಂಚರಿಸಿವೆ.