ಕರ್ನಾಟಕ

karnataka

ETV Bharat / city

ಗಲಭೆಯಾಗಿ ವರ್ಷವಾದ್ರೂ ಕಪ್ಪು ಮಸಿ ಮೆತ್ತಿಕೊಂಡಿರುವ ಡಿ.ಜೆ ಹಳ್ಳಿ ಠಾಣೆ: ನವೀಕರಣಕ್ಕೆ ಬಿಡುಗಡೆಯಾಗದ ಅನುದಾನ - ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಘಟನೆ

ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಘಟನೆ ನಡೆದು 11 ತಿಂಗಳಾದರೂ ಕೂಡ ಠಾಣೆಯ ಗೋಡೆಗಳ ಮೇಲೆ ಮೆತ್ತಿಕೊಂಡಿದ್ದ ಕಪ್ಪು ಮಸಿ ಹಾಗೆಯೇ ಉಳಿದಿದೆ. ಪುಡಿಯಾದ ಕಿಟಕಿ ಗಾಜುಗಳು, ಸುಟ್ಟು ಹೋದ ಬೇಸ್​ಮೆಂಟ್ ಎಲ್ಲವೂ ಹಾಗೇಯೇ ಇದ್ದು ಪೊಲೀಸ್ ಠಾಣೆಗೆ ಕಾಯಕಲ್ಪ ಕಲ್ಪಿಸಿಲು ಸರ್ಕಾರ ಹಿಂದೇಟು ಹಾಕಿದೆಯಾ ಎಂಬ ಅನುಮಾನ ಮೂಡಿದೆ.

DJ Halli
ಡಿಜೆ ಹಳ್ಳಿ ಠಾಣೆ

By

Published : Jul 11, 2021, 10:19 PM IST

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್​ವೊಂದು ರಾಜಧಾನಿಯಲ್ಲಿ ಕಂಡು ಕೇಳರಿಯದಂತಹ ಹಿಂಸಾತ್ಮಕ ಘಟನೆಗೆ ಸಾಕ್ಷಿಯಾಗಿತ್ತು. ಘಟನೆಯಲ್ಲಿ‌ ಕೋಟ್ಯಂತರ ರೂ. ಆಸ್ತಿಪಾಸ್ತಿ ನಷ್ಟವಾಗಿರುವುದಲ್ಲದೆ ಕಾನೂನು ಸುವ್ಯವಸ್ಥೆಗೆ ಸಹ ದೊಡ್ಡ ಸವಾಲಾಗಿತ್ತು.

ವಿವಾದಾತ್ಮಕ ಪೋಸ್ಟ್ ಹಾಕಿರುವುದನ್ನು ವಿರೋಧಿಸಿ ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಪೊಲೀಸ್ ಠಾಣೆಗಳಿಗೆ ಗಲಭೆಕೋರರು ನುಗ್ಗಿ ಸಾರ್ವಜನಿಕ ಆಸ್ತಿಯನ್ನು ಹಾಳುಮಾಡಿದ್ದರು. ನಾಲ್ಕು ವರ್ಷದ ಹಿಂದೆ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಡಿಜೆ ಹಳ್ಳಿ‌ ಪೊಲೀಸ್ ಠಾಣೆ ಮೇಲೆ‌‌ ಕಲ್ಲು ತೂರಾಟ ನಡೆಸಿದ್ದ ಗಲಭೆಕೋರರು, ಪೆಟ್ರೋಲ್ ಬಾಂಬ್ ಎಸೆದು ಠಾಣೆಯನ್ನು ಸುಟ್ಟು ಹಾಕಿದ್ದರು.

ಇನ್ನು ಈ ಘಟನೆ ಸಂಭವಿಸಿ 11 ತಿಂಗಳಾದರೂ ಕೂಡ ಠಾಣೆಯ ಗೋಡೆಗಳ ಮೇಲೆ ಮೆತ್ತಿಕೊಂಡಿದ್ದ ಕಪ್ಪು ಮಸಿ ಹಾಗೆಯೇ ಉಳಿದಿದೆ. ಪುಡಿಯಾದ ಕಿಟಕಿ ಗಾಜುಗಳು, ಸುಟ್ಟು ಹೋದ ಬೇಸ್​ಮೆಂಟ್ ಎಲ್ಲವೂ ಹಾಗೆಯೇ ಇದ್ದು ಪೊಲೀಸ್ ಠಾಣೆಗೆ ಕಾಯಕಲ್ಪ ಕಲ್ಪಿಸಿಲು ಸರ್ಕಾರ ಹಿಂದೇಟು ಹಾಕಿದೆಯಾ ಎಂಬ ಅನುಮಾನ ಮೂಡಿದೆ.

ಮಸಿಯಲ್ಲೇ ಮುಚ್ಚಿಕೊಂಡ ಪೊಲೀಸ್ ಠಾಣೆ: ಕಿಡಿಗೇಡಿಗಳಿಂದ ಹಾಳಾಗಿದ್ದ ಡಿಜೆ ಹಳ್ಳಿ ಪೊಲೀಸ್ ಠಾಣೆಯನ್ನು ನವೀಕರಿಸುವುದಾಗಿ ಸರ್ಕಾರ ಭರವಸೆ ನೀಡಿ, ವರ್ಷ ಕಳೆಯುತ್ತ ಬಂದರೂ ಠಾಣೆಯಲ್ಲಿ ಗಮನಾರ್ಹ ರೀತಿಯಲ್ಲಿ ನವೀಕರಣ ಕೆಲಸವಾಗಿಲ್ಲ. ಇದಕ್ಕೆ ಸರ್ಕಾರದಿಂದ ಅನುದಾನ ಸಹ ಬಿಡುಗಡೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಘಟನೆಗೆ ಸಾಕ್ಷಿ ಎಂಬಂತೆ ಪಾರ್ಕಿಂಗ್ ಕಾರಿಡಾರ್ ಗೋಡೆ ಹಾಗೂ ಠಾಣೆಯ ಮೊದಲ‌ನೇ ಮಹಡಿಯ ಗೋಡೆಗಳೆಲ್ಲ ಕಪ್ಪಾಗಿದೆ. ಆದರೂ ಕೂಡ ಇದೇ ವ್ಯವಸ್ಥೆಯಲ್ಲೇ 100 ಕ್ಕಿಂತ ಹೆಚ್ಚು ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ: ಶಾಸಕ‌‌ ಅಖಂಡ ಶ್ರೀನಿವಾಸಮೂರ್ತಿ ಸೋದರ ಸಂಬಂಧಿ ನವೀನ್‌‌ ಫೇಸ್​ಬುಕ್ ನಲ್ಲಿ ಇಸ್ಲಾಂ‌ಂ ಧರ್ಮಗುರು‌ ಕುರಿತಂತೆ ಅವಹೇಳನಕಾರಿ ಪೋಸ್ಟ್ ಮಾಡಿರುವುದನ್ನು ವಿರೋಧಿಸಿ ಡಿಜೆ ಹಾಗೂ‌ ಕೆಜಿ ಹಳ್ಳಿ‌ ಠಾಣೆಗಳ ಮುಂದೆ ಮತ್ತು ಕಾವಲ್ ಬೈರಸಂದ್ರದಲ್ಲಿರುವ ಶಾಸಕರ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಧ್ವಂಸ ಮಾಡಿದ್ದರು. ದಾಳಿಗೆ ಪ್ರತೀಕಾರವಾಗಿ ಏಕಾಏಕಿ ಸ್ಥಳದಲ್ಲಿ ಪೊಲೀಸರು ಗುಂಡಿನ ಚಕಮಕಿ ನಡೆಸಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೂರ್ವ ವಿಭಾಗದ ಪೊಲೀಸರು 400 ಕ್ಕಿಂತ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ಜೊತೆಗೆ ಅಧಿಕಾರಿಗಳು ಡಿಜೆಹಳ್ಳಿ ಸುತ್ತಮುತ್ತಲಿನ ಸ್ಥಳಗಳಲ್ಲಿ ದಾಳಿ ನಡೆಸಿ ಹಲವರನ್ನು ಬಂಧಿಸಿದ್ದರು. ಗಲಭೆಯಲ್ಲಿ ಭಾಗಿಯಾಗಿದ್ದ ಕೆಲ ಆರೋಪಿಗಳಿಗೆ ಇತ್ತೀಚೆಗಷ್ಟೇ ಕೋರ್ಟ್ ಜಾಮೀನು ನೀಡಿತ್ತು. ಗಲಭೆ ಪ್ರಕರಣದಲ್ಲಿ ಮಾಜಿ‌ ಮೇಯರ್ ಸಂಪತ್ ರಾಜ್ ಅವರನ್ನು ಸಹ ಬಂಧಿಸಲಾಗಿತ್ತು.

ABOUT THE AUTHOR

...view details