ಬೆಂಗಳೂರು: ಬಡವರ ಸೇವೆ ಮಾಡುವ ಮನೋಭಾವ ಎಲ್ಲರಲ್ಲಿಯೂ ಬರಬೇಕೆಂದು ಸಚಿವ ಭೈರತಿ ಬಸವರಾಜ್ ತಿಳಿಸಿದರು. ಕೆಆರ್‌ಪುರ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ, ಜಮೀನ್ದಾರರಾಗಿದ್ದ ದಿ. ರಾಮಚಂದ್ರಪ್ಪ ಅವರ ನೆನಪಿನಾರ್ಥವಾಗಿ ನೂತನವಾಗಿ ನಿರ್ಮಿಸಿರುವ ಶ್ರೀ ವಿಜಯ ಗಣಪತಿ ಡಯಾಲಿಸಿಸ್ ಸೆಂಟರ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಸ್ತಿ ಮಾಡುವುದು ಮುಖ್ಯವಲ್ಲ, ಮಾಡಿರುವ ಆಸ್ತಿಯನ್ನು ಯಾವ ರೀತಿ ಉಪಯೋಗಿಸಲಾಗುತ್ತಿದೆ ಎಂಬುದು ಮುಖ್ಯ ಎಂದರು.
ಕೆ.ಆರ್.ಪುರ: ದಾನಿಗಳಿಂದ ನಿರ್ಮಾಣವಾದ ಡಯಾಲಿಸಿಸ್ ಸೆಂಟರ್ ಲೋಕಾರ್ಪಣೆ - Dialysis Center in k r pura govt hospital
ದಿ. ರಾಮಚಂದ್ರಪ್ಪ ಅವರ ನೆನಪಿನಾರ್ಥವಾಗಿ ನೂತನವಾಗಿ ನಿರ್ಮಿಸಿರುವ ಶ್ರೀ ವಿಜಯ ಗಣಪತಿ ಡಯಾಲಿಸಿಸ್ ಸೆಂಟರ್ ಅನ್ನು ಸಚಿವ ಭೈರತಿ ಬಸವರಾಜ್ ಉದ್ಘಾಟಿಸಿದರು.
ಡಯಾಲಿಸಿಸ್ ಸೆಂಟರ್ ಉದ್ಘಾಟಿಸಿದ ಸಚಿವ ಭೈರತಿ ಬಸವರಾಜ
ದಾನಿಗಳಾದ ಕೆ.ಆರ್.ಪುರದ ಸುಶೀಲಾದೇವಿ ತಮ್ಮ ಪತಿ ದಿ.ರಾಮಚಂದ್ರ ಅವರ ನೆನಪಿನಾರ್ಥವಾಗಿ ಬಡವರ ಉಪಯೋಗಕ್ಕಾಗಿ ಕೆಆರ್‌ಪುರ ಸರ್ಕಾರಿ ಆವರಣದಲ್ಲಿ ಡಯಾಲಿಸಿಸ್ ಸೆಂಟರ್ ನಿರ್ಮಿಸಿಕೊಟ್ಟಿದ್ದಾರೆ. ಐದು ಬೆಡ್ಗಳಿರುವ ಸುಸಜ್ಜಿತ ಕಟ್ಟಡ ಮತ್ತು ಡಯಾಲಿಸಿಸ್ ಯಂತ್ರಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು, ಈ ರೀತಿಯ ಸೇವಾ ಮನೋಭಾವ ಎಲ್ಲರಲ್ಲಿಯೂ ಮೂಡಿದರೆ ದೇಶದಲ್ಲಿ ಬಡತನ ನಿರ್ಮೂಲನೆ ಮಾಡಬಹುದು ಎಂದು ಸಚಿವರು ಹೇಳಿದರು.
ಇದನ್ನೂ ಓದಿ:ವಿಡಿಯೋ: ಈಜಾಡುವ ಮೂಲಕ ಸ್ವಿಮಿಂಗ್ ಪೂಲ್ ಉದ್ಘಾಟಿಸಿದ ಶಾಸಕ ಯತ್ನಾಳ್