ಬೆಂಗಳೂರು:ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಿದ ಪೊಲೀಸರಲ್ಲಿ ಸಾಕಷ್ಟು ಮಂದಿಗೆ ಕೊರೊನಾ ಬಂದಿದೆ. ಆದರೆ ಕೊರೊನಾ ಗೆದ್ದುಬಂದ ಪೊಲೀಸರು ಇತರೆ ಮಂದಿಗೆ ಪ್ಲಾಸ್ಮಾ ದಾನ ಮಾಡಿದ್ದಾರೆ. ಪ್ಲಾಸ್ಮಾ ದಾನಿಗಳಿಗೆ ಕರ್ನಾಟಕ ಡಿಜಿ, ಐಜಿಪಿ ಪ್ರವೀಣ್ ಸೂದ್ ಕೆಎಸ್ ಆರ್ ಪಿಯ 13 ಸಿಬ್ಬಂದಿಗೆ ಪ್ರಶಂಸನಾ ಪತ್ರದೊಂದಿಗೆ ನಗದು ಬಹುಮಾನ ನೀಡಿದರು.
ಕೊರೊನಾ ಗೆದ್ದು ಬಂದು ಪ್ಲಾಸ್ಮಾ ದಾನ ಮಾಡಿದ ಪೊಲೀಸರಿಗೆ ಡಿಜಿ ಪ್ರವೀಣ್ ಸೂದ್ ಸನ್ಮಾನ - ಪ್ಲಾಸ್ಮಾ ದಾನ ಮಾಡಿದ ಪೊಲೀಸರು ಸುದ್ದಿ
ಕೇವಲ 13 ಸಿಬ್ಬಂದಿ ಅಷ್ಟೇ ಅಲ್ಲದೆ ಇನ್ನು 165 ಸಿಬ್ಬಂದಿ ಪ್ಲಾಸ್ಮಾ ದಾನ ಮಾಡಲು ಸಿದ್ಧರಿದ್ದಾರೆ. ಈ ವಿಷಯ ಜನರಿಗೆ ತಿಳಿದು, ಸಾಕಷ್ಟು ಜನ ಪ್ಲಾಸ್ಮಾ ದಾನ ಮಾಡುವಂತೆ ಡಿಜಿಪಿ ಪ್ರವೀಣ್ ಸೂದ್ ಮನವಿ ಮಾಡಿದ್ರು.
ಕೆಎಸ್ ಆರ್‌ಪಿಯ 4ನೇ ಪಡೆಯ ವೀರಭದ್ರಯ್ಯ, ನರೇಶ್ ಕುಮಾರ್ ಎನ್, ಮಾರುತಿ ನಾಯ್ಕ್ ಎಸ್, ವಿಶ್ವನಾಥ ಟಿ ಡಿ, ರಾಜೀವ್ ಕೊಲ್ಲಾಪುರಿ, ಗಿರಿಧರ್ ನಾಯ್ಕ್ 3ನೇ ಪಡೆಯ ಹನುಮಂತ, ಮಹದೇವ ಕೆ ಎನ್,1ನೇ ಪಡೆಯ ಎ ಎಂ ಮುತ್ತಣ್ಣ, ಸೋಮನಾಥ್ ತಳವಾರ ಉಮೇಶ್ ಸಿ ನಿಂಬಾಳ್ಕರ್ ಹಾಗೂ 5 ನೇ ಪಡೆಯ ಶ್ರೀಕಾಂತ್ ವಿಪಿ, ತೇಜಸ್ ಜಿ ಅವರಿಗೆ ಸನ್ಮಾನ ಮಾಡಿದರು. ಕೇವಲ 13 ಸಿಬ್ಬಂದಿ ಅಷ್ಟೇ ಅಲ್ಲದೆ ಇನ್ನೂ 165 ಸಿಬ್ಬಂದಿ ಪ್ಲಾಸ್ಮಾ ದಾನ ಮಾಡಲು ಸಿದ್ಧರಿದ್ದಾರೆ. ಈ ವಿಷಯ ಜನರಿಗೆ ತಿಳಿದು, ಸಾಕಷ್ಟು ಜನ ಪ್ಲಾಸ್ಮಾ ದಾನ ಮಾಡುವಂತೆ ಡಿಜಿ ಮನವಿ ಮಾಡಿದರು.
ಹಾಗೆ ಕೆಎಸ್ ಆರ್ ಪಿ ಪೊಲೀಸರಿಂದ ಅಶೋಕ್ ನಗರದಲ್ಲಿ ಸೈಕಲ್ ಜಾಥ ಕೂಡ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಡಿಜಿ, ಐಜಿಪಿ ಪ್ರವೀಣ್ ಸೂದ್, ಕೆಎಸ್ ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್, ಶಾಲಿನಿ ನಲ್ವಾಡ್ ಭಾಗಿಯಾಗಿದ್ದರು.