ಬೆಂಗಳೂರು/ದೇವನಹಳ್ಳಿ: ಲಾಕ್ಡೌನ್ ಸಡಿಕೆ ಮಾಡಿದ ಹಿನ್ನೆಲೆ ದೇಶಿ ವಿಮಾನಗಳ ಹಾರಾಟ ಪ್ರಾರಂಭವಾಗಿದೆ. ಮೂರು ವರ್ಷಗಳ ನಂತರ ಊರಿಗೆ ಬಂದ ಮಗಳನ್ನು ತಂದೆಯೊಬ್ಬರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೋಡಲು ಬಂದಿದ್ದು, ಈ ದೃಶ್ಯ ಮನಕಲುಕುವಂತಿತ್ತು.
ತಂದೆ-ಮಗಳ ಬಾಂಧವ್ಯಕ್ಕೆ ಸಾಕ್ಷಿಯಾದ ದೇವನಹಳ್ಳಿ ವಿಮಾನ ನಿಲ್ದಾಣ! - Devanahalli airport witnessing father-daughter relationship
ಮುಂಬೈನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಗಳು ಇಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ತಂದೆ ದೂರದಿಂದಲೇ ನಿಂತು ಮಗಳ ಯೋಗಕ್ಷೇಮ ವಿಚಾರಿಸಿ ಹೋಟೆಲ್ ಕ್ವಾರಂಟೈನ್ಗೆ ಕಳುಹಿಸಿಕೊಟ್ಟರು.
ತಂದೆ-ಮಗಳ ಬಾಂಧವ್ಯಕ್ಕೆ ಸಾಕ್ಷಿಯಾದ ದೇವನಹಳ್ಳಿ ವಿಮಾನ ನಿಲ್ದಾಣ
ಮುಂಬೈನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಗಳು ಇಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಳು. ಮಗಳು ಬರುವ ಸುದ್ದಿ ತಿಳಿದ ತಂದೆ ಏರ್ಪೋರ್ಟ್ಗೆ ಆಗಮಿಸಿ ಮಗಳನ್ನು ನೋಡಿ ಸಂತಸ ಪಟ್ಟರು. ಮುಂಬೈನಿಂದ ಬಂದ ಕಾರಣ ಆಕೆಯನ್ನು 14 ದಿನಗಳ ಕಾಲ ಹೋಟೆಲ್ ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಲಾಗಿದ್ದು, ಇದರಿಂದ ಮಗಳನ್ನು ನೇರವಾಗಿ ಮಾತನಾಡಿಸುವಂತಿರಲಿಲ್ಲ. ಫೋನ್ನಲ್ಲಿಯೇ ಮಗಳ ಯೋಗಕ್ಷೇಮ ವಿಚಾರಿಸಿದರು. ನಂತರ ಬಸ್ನಲ್ಲಿ ಕುಳಿತ ಮಗಳನ್ನು ಕಿಟಕಿಯಲ್ಲಿಯೇ ನೋಡಿ ಕ್ವಾರಂಟೈನ್ಗೆ ಬೀಳ್ಕೊಟ್ಟರು.