ಕರ್ನಾಟಕ

karnataka

ETV Bharat / city

ಬಿಜೆಪಿಯಲ್ಲಿ ಡಿಸಿಎಂ ಆಯ್ಕೆ ಗೊಂದಲ: ಉತ್ತರ ನೀಡದ ಲಿಂಬಾವಳಿ - Karnataka political development

ಬಿಜೆಪಿಯಲ್ಲಿ ಉಪಮುಖ್ಯಮಂತ್ರಿ ಆಯ್ಕೆ ಸಂಬಂಧ ಎದುರಾಗಿರುವ ಗೊಂದಲಕ್ಕೆ ಉತ್ತರಿಸಲು ಶಾಸಕ ಅರವಿಂದ ಲಿಂಬಾವಳಿ ನಿರಾಕರಿಸಿದ್ದಾರೆ.

MLA Aravind limbavali
ಶಾಸಕ ಅರವಿಂದ ಲಿಂಬಾವಳಿ

By

Published : Dec 17, 2019, 4:40 PM IST

ಬೆಂಗಳೂರು:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎದೆನೋವು ಕಾಣಿಸಿಕೊಂಡು ಆಂಜಿಯೋಪ್ಲಾಸ್ಟ್​ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಅರವಿಂದ ಲಿಂಬಾವಳಿ ಅವರು ಆರೋಗ್ಯ ವಿಚಾರಿಸಿದರು.

ಸಿದ್ದರಾಮಯ್ಯ ಆರೋಗ್ಯ ವಿಚಾರಣೆಗೆ ಕಾವೇರಿ ನಿವಾಸಕ್ಕೆ ಆಗಮಿಸಿದ್ದ ಅವರಿಗೆ ಮಾಧ್ಯಮದವರು ಕೇಳಲಾದ ಪ್ರಶ್ನೆಗೆ ಉತ್ತರಿಸದೆ ತೆರಳಿದರು. ಬಿಜೆಪಿಯಲ್ಲಿ ಉಪಮುಖ್ಯಮಂತ್ರಿ ಆಯ್ಕೆ ಸಂಬಂಧ ಎದುರಾಗಿರುವ ಗೊಂದಲದ ಬಗ್ಗೆಕೇಳುತ್ತಿದ್ದಂತೆ ಉತ್ತರ ಕೊಡದೇ ತಲೆ ತಗ್ಗಿಸಿ ಹೊರಟುಹೋದರು.

ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ. ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ. ಹಾರ್ಟ್​​ಗೆ ಸ್ಟಂಟ್ ಹಾಕಿದ್ದಾರೆ ಅಷ್ಟೇ. ಬೇರೆ ರೋಗಿಗಳಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಆಸ್ಪತ್ರೆಯಲ್ಲಿರುವವರನ್ನು ಭೇಟಿಯಾಗಲು ಹೋಗುವುದಿಲ್ಲ. ಇದೀಗ ಸಿದ್ದರಾಮಯ್ಯ ಅವರು ಚೇತರಿಕೆ ಕಂಡಿದ್ದಾರೆ. ಆನಂತರವೇ ಭೇಟಿಯಾಗಿ ಮಾತನಾಡಿದ್ದೇನೆ. ಆದಷ್ಟು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ABOUT THE AUTHOR

...view details