ಕರ್ನಾಟಕ

karnataka

ETV Bharat / city

ಸಾರಿಗೆ ಇಲಾಖೆ ನೌಕರರ ಹಿತಕ್ಕೆ ಬದ್ಧ: ಸಾರಿಗೆ ಸಚಿವ ಶ್ರೀರಾಮುಲು - ನೌಕರರ ಹಿತಕ್ಕೆ ಸಾರಿಗೆ ಇಲಾಖೆ ಬದ್ದ

ಅಮಾನತು ಹಿಂಪಡೆಯುವಂತೆ ಸಾಕಷ್ಟು ಮನವಿ ಬಂದ ಹಿನ್ನೆಲೆ ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಎಷ್ಟು ನೌಕರರು ಅಮಾನತು, ಎಷ್ಟು ನೌಕರರ ವಜಾ ಹಾಗೂ ಎಷ್ಟು ನೌಕರರ ಮೇಲೆ ಮೇಲೆ ಎಫ್​ಐಆರ್ ದಾಖಲಾಗಿದೆ ಅನ್ನೋ ಮಾಹಿತಿ ಪಡೆದಿದ್ದಾರೆ.

ಸಾರಿಗೆ ಸಚಿವ ಶ್ರೀರಾಮುಲು
ಸಾರಿಗೆ ಸಚಿವ ಶ್ರೀರಾಮುಲು

By

Published : Sep 14, 2021, 3:24 AM IST

ಬೆಂಗಳೂರು:ಸಾರಿಗೆ ಇಲಾಖೆ ನೌಕರರ ಹಿತಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಟ್ವೀಟ್​ ಮೂಲಕ ತಿಳಿಸಿದ್ದಾರೆ. ಸೋಮವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಎಲ್ಲಾ ನಿಗಮಗಳ ಹಿರಿಯ ಅಧಿಕಾರಿಗಳೊಂದಿಗೆ ನೌಕರ-ಸಿಬ್ಬಂದಿ ವರ್ಗದವರ ಹಿತದೃಷ್ಟಿಯಿಂದ ಮಹತ್ವದ ಸಭೆ ನಡೆಸಿದ್ದಾರೆ. ಅತಿ ಶೀಘ್ರದಲ್ಲಿ ಮಹತ್ವದ ನಿರ್ಧಾರಕ್ಕೆ ಬರಲಿದ್ದೇವೆ ಅಂತ ಹೇಳಿದ್ದಾರೆ.

ಇನ್ನು ಅಮಾನತುಗೊಂಡಿರುವ ನೌಕರರನ್ನ ಮರಳಿ ಕೆಲಸಕ್ಕೆ ಸೇರಿಸಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಹಲವು ಕಾರಣಗಳಿಂದ ಕೆಲ ಸಾರಿಗೆ ನೌಕರನ್ನು ಅಮಾನತುಗೊಳಿಸಲಾಗಿತ್ತು. ಇತ್ತೀಚೆಗೆ ಕೋವಿಡ್ ಸಮಯದಲ್ಲಿ ಪ್ರತಿಭಟನೆ ನಡೆಸಿದ್ದ ಕೆಲ ನೌಕರರನ್ನೂ ಅಮಾನತುಗೊಳಿಸಲಾಗಿತ್ತು.

ಅಮಾನತು ಹಿಂಪಡೆಯುವಂತೆ ಸಾಕಷ್ಟು ಮನವಿ ಬಂದ ಹಿನ್ನೆಲೆ ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಎಷ್ಟು ನೌಕರರು ಅಮಾನತು, ಎಷ್ಟು ನೌಕರರ ವಜಾ ಹಾಗೂ ಎಷ್ಟು ನೌಕರರ ಮೇಲೆ ಮೇಲೆ ಎಫ್​ಐಆರ್ ದಾಖಲಾಗಿದೆ ಅನ್ನೋ ಮಾಹಿತಿ ಪಡೆದಿದ್ದಾರೆ.

ಬಹುತೇಕ ಅಮಾನತು ಹಾಗೂ ವಜಾಗೊಂಡ ನೌಕರರನ್ನ ವಾಪಸ್ ಕೆಲಸಕ್ಕೆ ಸೇರಿಸಿಕೊಳ್ಳವ ಬಗ್ಗೆ ಚರ್ಚೆ ನಡೆದಿದೆ. ನಾಳೆ ಮಂಗಳವಾರ ಸಂಜೆಯೊಳಗೆ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಇದನ್ನು ಓದಿ:ತಾಕತ್​ ಇದ್ರೆ ಕಾಂಗ್ರೆಸ್​ ಆಡಳಿತ ಇರುವ ರಾಜ್ಯದಲ್ಲಿ ವ್ಯಾಟ್​ ಕಡಿಮೆ ಮಾಡಲಿ : ಸಚಿವ ಶ್ರೀರಾಮುಲು

ABOUT THE AUTHOR

...view details