ಕರ್ನಾಟಕ

karnataka

ETV Bharat / city

ಕೊರೊನಾ ವಾರಿಯರ್ಸ್​ಗೆ‌ ಹೆಲ್ತ್​ ಕಿಟ್ ವಿತರಿಸಿದ ಆಯುಷ್ ಇಲಾಖೆ: ಧನ್ಯವಾದ ಹೇಳಿದ ‌ನಗರ ಪೊಲೀಸ್​ ಆಯುಕ್ತ - ಆಯುಷ್​ ಇಲಾಖೆ ಹೆಲ್ತ್​ ಕಿಟ್​ ವಿತರಣೆ

ಜನರ ಆರೋಗ್ಯ ಕಾಪಾಡುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್​ ಪೈಕಿ ಪೊಲೀಸರ ಆರೋಗ್ಯ ರಕ್ಷಣೆಗಾಗಿ ಆಯುಷ್​​ ಇಲಾಖೆ ವತಿಯಿಂದ ಹಲ್ತ್ ​ಕಿಟ್ ನೀಡಲಾಗಿದ್ದು, ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಅವರಿಗೆ ಹಸ್ತಾಂತರಿಸಲಾಯಿತು.​​​

department-of-ayush-gave-health-kit-to-police
ಕೊರೊನಾ ವಾರಿಯರ್ಗೆ‌ ಕಿಟ್ ವಿತರಿಸಿದ ಆಯುಷ್ ಇಲಾಖೆ

By

Published : Jul 6, 2020, 3:14 PM IST

ಬೆಂಗಳೂರು: 'ನಮ್ಮ ರಕ್ಷಣೆಗೆ ನೀವು.. ನಿಮ್ಮ ರಕ್ಷಣೆಗೆ ನಾವು' ಎಂಬ ಉದ್ದೇಶದಿಂದ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ಕೋವಿಡ್​ ವಾರಿಯರ್ಸ್‌ ಪೈಕಿ ಪೊಲೀಸರಿಗೆ ಇಂದು ಆಯುಷ್ ಇಲಾಖೆ ವತಿಯಿಂದ ಹೆಲ್ತ್ ಕಿಟ್ ವಿತರಣೆ ಮಾಡಲಾಯಿತು.

ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಯುಷ್ ಇಲಾಖೆಯ‌ ಫೌಂಡರ್ ರಾಘವೇಂದ್ರ ಶೆಟ್ಟಿ ಆಗಮಿಸಿ ಟ್ರಸ್ಟ್ ವತಿಯಿಂದ ನಗರದ ಪೊಲೀಸ್ ಆಯುಕ್ತರಿಗೆ ಆಯುಷ್ ವಾತಾ ಚೂರ್ಣ ಪೌಡರ್, ಸಂಶವನವಟಿ ಗುಳಿಗೆ, ಸ್ಯಾನಿಟೈಸರ್​, ಡೆಟಾಲ್ ಸೋಪ್, ಹ್ಯಾಂಡ್ ಸ್ಯಾನಿಟೈಸರ್, 250 ಗ್ರಾಂ ಖರ್ಜೂರ, 250 ಗ್ರಾಂ ಅರಿಶಿನ ಪುಡಿ, ಹ್ಯಾಂಡ್ ಗ್ಲೌಸ್, ಮಾಸ್ಕ್​ ಹಸ್ತಾಂತರಿಸಿದರು.

ಕೊರೊನಾ ವಾರಿಯರ್ಸ್​ಗೆ ಹೆಲ್ತ್​‌ ಕಿಟ್ ವಿತರಿಸಿದ ಆಯುಷ್ ಇಲಾಖೆ

ಕಿಟ್ ಸ್ವೀಕರಿಸಿ ಮಾತನಾಡಿದ ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್, ಕೊರೊನಾ ವಾರಿಯರ್ಸ್​​​ಗೆ ಹೆಲ್ತ್​ ಕಿಟ್ ವಿತರಣೆ ಮಾಡಿದ್ದಕ್ಕೆ ಧನ್ಯವಾದ ಹೇಳಿದರು. ಹಾಗೆಯೇ ಪೊಲೀಸರಿಗೆ ಇಮ್ಯುನಿಟಿ ಪವರ್ ಹೆಚ್ಚು ಮಾಡುವ ವಸ್ತುಗಳನ್ನು ನೀಡಿದ್ದಕ್ಕೆ ಖುಷಿ ವ್ಯಕ್ತಪಡಿಸಿದರು. ಪೊಲೀಸರಲ್ಲಿ ಪಾಸಿಟಿವ್ ಕೇಸ್ ಪತ್ತೆಯಾಗುತ್ತಿದ್ದು, ಎಲ್ಲಾ ಸಿಬ್ಬಂದಿ ಆರೋಗ್ಯ ಕಾಪಾಡಿಕೊಲ್ಳಿ ಎಂದು ಸಲಹೆ ನೀಡಿದರು.

ABOUT THE AUTHOR

...view details