ಕರ್ನಾಟಕ

karnataka

ETV Bharat / city

ಬೇಡಿಕೆ ಕುಸಿತ: ಭರ್ತಿಯಾಗದೇ ಖಾಲಿ ಉಳಿದ 27 ಸಾವಿರ ಇಂಜಿನಿಯರಿಂಗ್ ಸೀಟುಗಳು - ಇಂಜಿನಿಯರಿಂಗ್ ಕಾಲೇಜುಗಳು

ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಸೈನ್ಸ್, ಮೆಕ್ಯಾನಿಕಲ್ ವಿಭಾಗ ಸೇರಿದಂತೆ ಬೇಡಿಕೆ ಇರುವ ಇಂಜಿನಿಯರಿಂಗ್ ಸೀಟುಗಳು ಭರ್ತಿಯಾಗದೇ ಖಾಲಿ ಉಳಿದಿವೆ.

ಇಂಜಿನಿಯರಿಂಗ್ ಸೀಟುಗಳು

By

Published : Sep 1, 2019, 5:36 AM IST

ಬೆಂಗಳೂರು: ಇಂಜಿನಿಯರಿಂಗ್ ಸೀಟುಗಳ ಬೇಡಿಕೆ ಕುಸಿಯುತ್ತಿದ್ದು, ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ 27 ಸಾವಿರ ಸೀಟುಗಳು ಭರ್ತಿಯಾಗದೇ ಖಾಲಿ ಉಳಿದಿವೆ.

ಕಂಪ್ಯೂಟರ್ ಸೈನ್ಸ್, ಮೆಕ್ಯಾನಿಕಲ್ ವಿಭಾಗ ಸೇರಿದಂತೆ ಬೇಡಿಕೆ ಇರುವ ವಿಭಾಗಗಳ ಸೀಟು ಸಹ ಭರ್ತಿಯಾಗದೇ ಉಳಿದಿವೆ. ಮೆಕ್ಯಾನಿಕಲ್ ವಿಭಾಗದಲ್ಲಿ 8500, ಕಂಪ್ಯೂಟರ್ ಸೈನ್ಸ್​​ನಲ್ಲಿ 5500, ಸಿವಿಲ್​ನಲ್ಲಿ 500, ಎಲೆಕ್ಟ್ರಿಕಲ್ ವಿಭಾಗದಲ್ಲಿ 2000 ಸೀಟುಗಳು ವಿದ್ಯಾರ್ಥಿಗಳಿಲ್ಲದೇ ಖಾಲಿ ಉಳಿದಿವೆ. ಸಿಇಟಿ ನಡೆಸಿದ‌ ನಾಲ್ಕನೇ ಸುತ್ತಿನ ಕೌನ್ಸಿಲಿಂಗ್ ನಂತರವೂ ಇಷ್ಟೊಂದು ಸೀಟುಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆದಿಲ್ಲ.

ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸಿಇಟಿ ಮೂಲಕ ಒಟ್ಟು 65 ಸಾವಿರ ಸೀಟು ಭರ್ತಿ ಮಾಡುವ ಉದ್ದೇಶ ಹೊಂದಲಾಗಿತ್ತು. ಇಲ್ಲಿಯವರೆಗೆ ನಡೆದ ನಾಲ್ಕು ಸುತ್ತುಗಳ ಕೌನ್ಸಿಲಿಂಗ್​ನಲ್ಲಿ 38 ಸಾವಿರ ವಿದ್ಯಾರ್ಥಿಗಳು ಸಿಇಟಿ ಮೂಲಕ ಪ್ರವೇಶ ಪಡೆದಿದ್ದಾರೆ. ಮೂರನೇ ಸುತ್ತಿನ ಕೌನ್ಸಿಲಿಂಗ್ ಆದ ನಂತರ 22 ಸಾವಿರ ಸೀಟುಗಳು ಖಾಲಿ ಉಳಿದಿದ್ದವು. ಮತ್ತಷ್ಟು ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಾಲ್ಕನೇ ಸುತ್ತಿನ ಕೌನ್ಸಿಲಿಂಗ್ ನಡೆಸಿದರೆ, ಖಾಲಿ ಉಳಿದಿರುವ ಸೀಟುಗಳ ಸಂಖ್ಯೆ ಕಡಿಮೆಯಾಗುವ ಬದಲು ಹೆಚ್ಚಾಗಿದೆ.

ABOUT THE AUTHOR

...view details