ಬೆಂಗಳೂರು:ರಾಜ್ಯದಲ್ಲಿ ಸಾಂಕ್ರಾಮಿಕ ಕೊರೊನಾ ಸೋಂಕು ಇಳಿಕೆ ಬೆನ್ನಲ್ಲೇ ಇದೀಗ ರೂಪಾಂತರಿ ಸೋಂಕಿನ ಕಾಟ ಶುರುವಾಗಿದೆ. ಮಹಾರಾಷ್ಟ್ರದಲ್ಲಿ ಪತ್ತೆಯಾಗಿದ್ದ 'ಡೆಲ್ಟಾ ಪ್ಲಸ್' ವೈರಸ್ ಇದೀಗ ಮೈಸೂರಿನಲ್ಲಿ ಪತ್ತೆಯಾಗಿದೆ. ಇದೀಗ ರಾಜ್ಯಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿಯಾಗಿರುವುದು ಆತಂಕ ಮೂಡಿಸಿದೆ.
ಎನ್ಸಿಬಿಸಿ (ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸ್) ನಡೆಸಿದ ಜೀನೋಮಿಕ್ ಸೀಕ್ವೆನ್ಸಿಂಗ್ನಲ್ಲಿ ಡೆಲ್ಟಾ ಪ್ಲಸ್ ವೈರಸ್ ( DELTA PLUS:Delta+K417N) ಪತ್ತೆಯಾಗಿದೆ. ಡೆಲ್ಟಾ ಪ್ಲಸ್ ವೈರಸ್ ಹೆಚ್ಚು ಹರಡುವಿಕೆ ಗುಣ ಹೊಂದಿದ್ದು, ಸೋಂಕಿನ ತೀವ್ರತೆಯು ಕೂಡ ಹೆಚ್ಚಿದೆ. ಹೀಗಾಗಿ, ರಾಜ್ಯದಲ್ಲಿ ಈ ವೈರಸ್ ಪತ್ತೆಯಿಂದಾಗಿ ಇನ್ನಷ್ಟು ಆತಂಕ ಹೆಚ್ಚಿಸಿದೆ.
ಇತ್ತೀಚೆಗಷ್ಟೇ ಕೊರೊನಾ ಸೋಂಕು ಪ್ರಕರಣದಲ್ಲಿ ಇಳಿಕೆ ಕಂಡಿದ್ದು, ಅನ್ಲಾಕ್ ಮಾಡಲಾಗಿದೆ. ಜನರು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದು, ಇದೀಗ ಮೈಸೂರು ಒಂದರಲ್ಲೇ ಲಾಕ್ಡೌನ್ ಮುಂದುವರೆದಿದೆ. ಹೀಗಾಗಿ, ಇನ್ನಷ್ಟು ಎಚ್ಚರಿಕೆ ವಹಿಸುವ ಅಗತ್ಯವಿದೆ.