ಬೆಂಗಳೂರು:ಬೆಳಕಿನ ಹಬ್ಬ ದೀಪಾವಳಿ ಬಂದರೆ ಎಲ್ಲರಿಗೂ ಸಂಭ್ರಮ, ಸಡಗರ. ಮನೆ ಮಂದಿಯೆಲ್ಲಾ ಬಣ್ಣ ಬಣ್ಣದ ಹಣತೆ ತಂದು, ಭಿನ್ನ-ವಿಭಿನ್ನದ ಪಟಾಕಿ ಸಿಡಿಸಿ ಸಂತಸದಲ್ಲಿ ಮಿಂದೇಳುತ್ತವೆ. ಇದು ನಮಗೆ ಖುಷಿ ಕೊಟ್ಟರೆ, ಮೂಕ ಪ್ರಾಣಿಗಳು ಮಾತ್ರ ತೊಂದರೆ ಅನುಭವಿಸುತ್ತವೆ.
ಖುಷಿಯಾಗಿ ಓಡಾಡಿಕೊಂಡು, ಮಾಲೀಕರೊಂದಿಗೆ ಕೀಟಲೆ ಮಾಡ್ತಾ, ಹೇಳೋ ಮಾತುಗಳನ್ನ ಕೇಳುವ ಶ್ವಾನಗಳು ಪಟಾಕಿ ಶಬ್ದಕ್ಕೆ ಹೆದರಿ ಮನೆ ಬಿಟ್ಟು ಹೋಗಿರುವ ಉದಾಹರಣೆಗಳಿವೆ. ಪಟಾಕಿ ಸದ್ದಿಗೆ ಭಯಭೀತಗೊಳ್ಳುವ ಶ್ವಾನ ಮತ್ತಿತರ ಸಾಕುಪ್ರಾಣಿಗಳು ಅಸಹಜ ರೀತಿಯಲ್ಲಿ ವರ್ತಿಸುತ್ತವೆ. ಜತೆಗೆ ಜೋರಾದ ಶಬ್ದದಿಂದ ಶ್ವಾನಗಳು ಕಿವುಡಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅವುಗಳ ಕಾಲು, ಕಣ್ಣುಗಳು ಹಾನಿಯೂ ಆಗುತ್ತದೆ. ಎಷ್ಟೋ ಪ್ರಾಣಿಗಳು ತಮ್ಮ ಜೀವವನ್ನೇ ಕಳೆದುಕೊಂಡಿವೆ.