ಬೆಂಗಳೂರು: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಕೆ.ಜಿ ಗೆ 70 ರಿಂದ 100 ರೂಪಾಯಿಯಂತೆ ಮಾರಾಟವಾಗುತ್ತಿದೆ. ಬೆಲೆ ಸ್ವಲ್ಪ ಇಳಿಕೆಯಾಗಿದ್ದು ಗ್ರಾಹಕರು, ಹೋಟೆಲ್ ಮಾಲೀಕರು ನಿಟ್ಟುಸಿರು ಬಿಡುವಂತಾಗಿದೆ.
ಈರುಳ್ಳಿ ಬೆಲೆ ಇಳಿಕೆ: ಸ್ಥಳೀಯ ಈರುಳ್ಳಿಗೆ ಹೆಚ್ಚಿದ ಬೇಡಿಕೆ - onion price news
ಬೆಂಗಳೂರು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಕೆ.ಜಿ ಗೆ 70 ರಿಂದ 100 ರೂಪಾಯಿಯಂತೆ ಮಾರಾಟವಾಗುತ್ತಿದೆ. ಬೆಲೆ ಸ್ವಲ್ಪ ಇಳಿಕೆಯಾಗಿದ್ದು ಗ್ರಾಹಕರು, ಹೋಟೆಲ್ ಮಾಲೀಕರು ನಿಟ್ಟುಸಿರು ಬಿಡುವಂತಾಗಿದೆ.
ಟರ್ಕಿ ಹಾಗೂ ಈಜಿಫ್ಟ್ ನಿಂದ ಈರುಳ್ಳಿ ಆಮದು ಮಾಡಿಕೊಳ್ತಿರುವ ಹಿನ್ನಲೆ ಈರುಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಆದ್ರೆ ಆಮದು ಮಾಡಿಕೊಂಡಿರುವ ಈರುಳ್ಳಿ ನೋಡಲು ಚೆನ್ನಾಗಿದ್ರೂ ಖಾರ ಹೆಚ್ಚಿದ್ದು, ಜನರು ಹೆಚ್ಚಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಈರುಳ್ಳಿಗೆ ಹೆಚ್ಚು ಬೇಡಿಕೆಯಿಡುತ್ತಿದ್ದಾರೆ ಎಂದು ವರ್ತಕರು ತಿಳಿಸಿದರು.
ಎಪಿಎಂಸಿಯಲ್ಲಿ ಈರುಳ್ಳಿ 50 ಕೆ.ಜಿ ಗೆ 4,000 ದಿಂದ 5,000 ಕ್ಕೆ ಮಾರಾಟವಾಗುತ್ತಿದೆ. ಜನವರಿಯಲ್ಲಿ ಹೊಸ ಬೆಳೆ ಬಂದ ಮೇಲೆ ಇನ್ನೂ ಇಳಿಕೆಯಾಗುತ್ತದೆ. ಅಲ್ಲಿಯವರೆಗೆ ಅರ್ಧ ಗಂಟೆಗೂ ಈರುಳ್ಳಿ ಬೆಲೆಯಲ್ಲಿ ಏರಿಳಿಕೆ ಕಂಡು ಬರುತ್ತದೆ. ಅಲ್ಲದೆ ಕಳಪೆ ಗುಣಮಟ್ಟದ ಈರುಳ್ಳಿ ಹೆಚ್ಚು ಪ್ರಮಾಣದಲ್ಲಿ ಬರುತ್ತಿರುವುದಿಂದ ಬೆಲೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆಲೂಗಡ್ಡೆ ಹಾಗೂ ಈರುಳ್ಳಿ ವರ್ತಕರ ಕಾರ್ಯದರ್ಶಿ ಉದಯಶಂಕರ್ ತಿಳಿಸಿದ್ದಾರೆ.