ಕರ್ನಾಟಕ

karnataka

ETV Bharat / city

ಸೋಂಕಿತರ ಸಂಖ್ಯೆ ಇಳಿಕೆ, ಆಸ್ಪತ್ರೆ ಬೆಡ್‌ಗಳಿಗಾಗಿ ಕಡಿಮೆಯಾದ ಬೇಡಿಕೆ.. ನಿಟ್ಟುಸಿರು ಬಿಟ್ಟ ಜನತೆ

ನಗರದಲ್ಲಿ ಸೋಂಕಿತರ ಸಂಖ್ಯೆ ಇಳಿಕೆ ಕಂಡ ಬೆನ್ನಲ್ಲೇ ಬೆಡ್‌ಗಳಿಗಾಗಿ ಬೇಡಿಕೆ ಕೂಡ ಕಡಿಮೆಯಾಗಿದೆ. ಒಂದು ತಿಂಗಳ ಹಿಂದೆ ನಗರದಲ್ಲಿ ಬೆಡ್ ಸಿಗದೇ ಹಾದಿಬೀದಿಯಲ್ಲಿ ಸೋಂಕಿತರು ಸಾಯುತ್ತಿದ್ದರು. ಇದೀಗ ಒಂದು ತಿಂಗಳ ಬಳಿಕ ರಾಜ್ಯದ ಜನತೆ ನಿಟ್ಟಿಸಿರು ಬಿಟ್ಟಿದ್ದಾರೆ.

reduced-demand-for-beds
ಬೆಡ್‌ಗಳಿಗಾಗಿ ಕಡಿಮೆಯಾದ ಬೇಡಿಕೆ

By

Published : Jun 2, 2021, 4:11 PM IST

ಬೆಂಗಳೂರು‌:ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖ ಆಗುತ್ತಿರುವ ಬೆನ್ನಲ್ಲೇ, ಬೆಂಗಳೂರಿನಲ್ಲಿ ಬೆಡ್‌ಗಾಗಿ ಇದ್ದ ಬೇಡಿಕೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಬೆಡ್‌ಗಳಿಗಾಗಿ ಕಡಿಮೆಯಾದ ಬೇಡಿಕೆ

ಓದಿ: ಏರ್​ಫೋರ್ಸ್ ಬೆಡ್ ನೀಡಿದರೂ ಬಳಸಿಕೊಂಡಿಲ್ಲವೇಕೆ : ಬಿಬಿಎಂಪಿಗೆ ಹೈಕೋರ್ಟ್ ತರಾಟೆ

ಸೋಂಕಿತರ ಸಂಖ್ಯೆ ಇಳಿಕೆಯಾದ ಹಿನ್ನೆಲೆ ನಗರದ ಆಸ್ಪತ್ರೆಗಳಲ್ಲಿ ಬೆಡ್‌ಗಳಿಗಾಗಿ ಬೇಡಿಕೆ ಕಡಿಮೆಯಾಗಿದೆ. ಇದೇ ಮೇ ತಿಂಗಳಲ್ಲಿ ನಗರದ ಆಸ್ಪತ್ರೆಗಳಲ್ಲಿ ಬೆಡ್‌ಗಾಗಿ ಎಲ್ಲ ಕಡೆ ಬೇಡಿಕೆ ಇತ್ತು. ಆದರೆ, ಜೂನ್‌ನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾದ ಕಾರಣ ಬೆಡ್‌ಗಾಳಿಗಾಗಿ ಬೇಡಿಕೆ ಕಡಿಮೆಯಾಗಿದೆ.

ಸರ್ಕಾರಿ ಕೋಟಾದಡಿ ರಾಜಧಾನಿಯಲ್ಲಿ 13,383 ಬೆಡ್‌ಗಳು ಲಭ್ಯವಿದ್ದು, ಇದೀಗ 13,383 ಬೆಡ್ ನಲ್ಲಿ, 8,366 ಬೆಡ್‌ಗಳು ಖಾಲಿ ಇವೆ. ಜೊತೆಗೆ ನಗರದಲ್ಲಿ ಇನ್ನೂ 4,920 ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಕೋಟಾದಲ್ಲಿ 7191 ಜನರಲ್ ಬೆಡ್‌ಗಳು ಇವೆ. ಇನ್ನು ಜನರಲ್ ಬೆಡ್ ನಲ್ಲಿ 1,304 ಸೋಂಕಿತರು ದಾಖಲಾಗಿದ್ದು, ಇನ್ನು 5,848 ಬೆಡ್‌ಗಳು ಖಾಲಿ ಇವೆ.

4,964 ಹೆಚ್​​​ಡಿಯು ಬೆಡ್‌ನಲ್ಲಿ, 2,445 ಮಂದಿ ಸೋಂಕಿತರು ದಾಖಲಾಗಿದ್ದಾರೆ. ಇದರ ಜೊತೆಗೆ 639 ಐಸಿಯು ವೆಂಟಿಲೇಟರ್ ಬೆಡ್‌ಗಳಲ್ಲಿ 618 ಸೋಂಕಿತರು ದಾಖಲಾಗಿದ್ದು, 17 ಬೆಡ್‌ಗಳು ಖಾಲಿ‌ ಇವೆ. ನಗರದಲ್ಲಿ 589 ಐಸಿಯು ಬೆಡ್ ನಲ್ಲಿ 550 ಸೋಂಕಿತರು ದಾಖಲಾಗಿ, 25 ಐಸಿಯು ಬೆಡ್‌ಗಳು ಖಾಲಿ ಇವೆ.

ಒಟ್ಟಾರೆ, ನಗರದಲ್ಲಿ ಸೋಂಕಿತರ ಸಂಖ್ಯೆ ಇಳಿಕೆ ಕಂಡ ಬೆನ್ನಲ್ಲೇ ಬೆಡ್‌ಗಳಿಗಾಗಿ ಬೇಡಿಕೆ ಕೂಡ ಕಡಿಮೆಯಾಗಿದೆ. ಒಂದು ತಿಂಗಳ ಹಿಂದೆ ನಗರದಲ್ಲಿ ಬೆಡ್ ಸಿಗದೇ ಹಾದಿಬೀದಿಯಲ್ಲಿ ಸೋಂಕಿತರು ಸಾಯುತ್ತಿದ್ದರು. ಇದೀಗ ಒಂದು ತಿಂಗಳ ಬಳಿಕ ರಾಜ್ಯದ ಜನತೆ ನಿಟ್ಟಿಸಿರು ಬಿಟ್ಟಿದ್ದಾರೆ.

ABOUT THE AUTHOR

...view details