ಪಾಸಿಟಿವ್ ಸಂಖ್ಯೆಯಲ್ಲಿ ಇಳಿಕೆ: ಇದಕ್ಕೆ ಕಾರಣ ಏನು ಗೊತ್ತಾ? - Is this the reason for decrease in number of infected people
ಕೊರೊನಾ ನಿಯಂತ್ರಣಕ್ಕಾಗಿ ನಿತ್ಯ 1 ಲಕ್ಷ ಪರೀಕ್ಷೆಯನ್ನು ಹೆಚ್ಚಿಸಲು ಕೊರೊನಾ ಕಾರ್ಯಪಡೆ ಸಮಿತಿ ಸೂಚಿಸಿದೆ. ಆದಾಗ್ಯೂ, ಪರೀಕ್ಷೆಗಳನ್ನು ಬಿಬಿಎಂಪಿ ಅರ್ಧದಷ್ಟು ಕಡಿಮೆ ಮಾಡಿದೆ. ದೇಶದ ಎಲ್ಲ ನಗರಗಳಿಗಿಂತ ಬೆಂಗಳೂರಿನಲ್ಲಿ ಹೆಚ್ಚು ಸೋಂಕು ಇದೆ. ಹೀಗಾಗಿ, ದೇಶದಲ್ಲಿ ಹೆಚ್ಚು ಕೊರೊನಾ ಪ್ರಕರಣಗಳನ್ನು ಹೊಂದಿರುವ ನಗರ ಎಂದು ಹೆಸರಿಸುವ ಭಯ ನಿರ್ಮಾಣ ಆಗಿದೆ.
ಸಂಗ್ರಹ ಚಿತ್ರ
By
Published : May 11, 2021, 7:46 PM IST
|
Updated : May 11, 2021, 8:21 PM IST
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ ಉಂಟಾಗುತ್ತಿರುವ ಹಿನ್ನೆಲೆ ಕೊರೊನಾ ಸರಪಳಿ ಮುರಿಯಲು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಕಠಿಣ ನಿಯಮಗಳ ಹೊರತಾಗಿಯೂ, ಸೋಂಕಿತರ ಸಂಖ್ಯೆ ದ್ವಿಗುಣಗೊಂಡಿದೆ. ಆದರೆ, ಪ್ರಮುಖ ವಿಷಯ ಎಂದರೆ ಕಳೆದ 2-3 ದಿನಗಳಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ.
ಪಾಸಿಟಿವ್ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಕೊರೊನಾ ಪರೀಕ್ಷೆಗಳನ್ನು ಕಡಿಮೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಕೇವಲ 32,862 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಪೈಕಿ 16,747 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿಂದೆ, ನಿತ್ಯ 65,000 ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು.
ಅಂಕಿ-ಸಂಖ್ಯೆಗಳ ವಿವರ
ಇದರ ನಡುವೆ ಕೊರೊನಾ ನಿಯಂತ್ರಣಕ್ಕಾಗಿ ನಿತ್ಯ 1 ಲಕ್ಷ ಪರೀಕ್ಷೆಯನ್ನು ಹೆಚ್ಚಿಸಲು ಕೊರೊನಾ ಕಾರ್ಯಪಡೆ ಸಮಿತಿ ಸೂಚಿಸಿದೆ. ಆದಾಗ್ಯೂ, ಪರೀಕ್ಷೆಗಳನ್ನು ಬಿಬಿಎಂಪಿ ಅರ್ಧದಷ್ಟು ಕಡಿಮೆ ಮಾಡಿದೆ. ದೇಶದ ಎಲ್ಲ ನಗರಗಳಿಗಿಂತ ಬೆಂಗಳೂರಿನಲ್ಲಿ ಹೆಚ್ಚು ಸೋಂಕು ಇದೆ. ಹೀಗಾಗಿ, ದೇಶದಲ್ಲಿ ಹೆಚ್ಚು ಕೊರೊನಾ ಪ್ರಕರಣಗಳನ್ನು ಹೊಂದಿರುವ ನಗರ ಎಂದು ಹೆಸರಿಸುವ ಭಯ ನಿರ್ಮಾಣ ಆಗಿದೆ. ಈ ಕಾರಣಕ್ಕಾಗಿಯೇ ಬಿಬಿಎಂಪಿ ಪರೀಕ್ಷೆಗಳನ್ನು ಕಡಿಮೆ ಮಾಡಿದೆ ಎನ್ನಲಾಗಿದೆ.
ಬೆಂಗಳೂರು ನಗರದ ಪ್ರಕರಣ ವಿವರಗಳು:
ದಿನಾಂಕ
ಪ್ರಕರಣಗಳ ಸಂ.
ಸಾವು
ಮೇ 1
19,353
162
ಮೇ 2
21,199
64
ಮೇ 3
22,112
115
ಮೇ 4
20,870
132
ಮೇ 5
23,106
161
ಮೇ 6
23,706
139
ಮೇ 7
21,376
346
ಮೇ 8
18, 473
285
ಮೇ 9
20,897
281
ಮೇ 10
16,747
374
ಬೆಂಗಳೂರಿನಲ್ಲಿ ಮಾತ್ರ ತಾಂತ್ರಿಕ ಸಲಹಾ ಸಮಿತಿಯು ಪ್ರತಿದಿನ ಒಂದು ಲಕ್ಷ ಜನರಿಗೆ ಕೋವಿಡ್ ಪರೀಕ್ಷೆಯನ್ನು ಮಾಡಬೇಕೆಂದು ಶಿಫಾರಸು ಮಾಡಿದೆ. ಆದರೆ, ಈಗ ರಾಜ್ಯದಾದ್ಯಂತ ಒಂದೂವರೆ ಲಕ್ಷ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ರಾಜ್ಯ ಕೋವಿಡ್ ಪರೀಕ್ಷೆಯ ಅಂಕಿ ಅಂಶಗಳು:
ದಿನಾಂಕ
ಕೋ.ಪರೀಕ್ಷೆ
ಸೋಂ.ಸಂ.
ಏ. 27
1,70,116
31,830
ಏ. 28
1,71,997
39,047
ಏ. 29
1,75,816
35,024
ಏ. 30
1,89,793
48,296
ಮೇ 01
1,77,982
40,990
ಮೇ 02
1,58,365
37,733
ಮೇ 03
1,49,090
44,438
ಮೇ 04
1,53,707
44,631
ಮೇ 05
1,55,224
50,112
ಮೇ 06
1,64,441
49,058
ಮೇ 07
1,58,902
48,781
ಮೇ 08
1,57,027
47,563
ಮೇ 09
1,46,491
47,930
ಮೇ 10
1,24,110
39,305
ನಿನ್ನೆ ರಾಜ್ಯವ್ಯಾಪಿ 1,24,100 ಜನರನ್ನು ಪರೀಕ್ಷಿಸಲಾಯಿತು. ಈ ಹಿಂದೆ 2 ಲಕ್ಷಕ್ಕೆ ತಲುಪಿದ್ದ ಕೋವಿಡ್ ಪರೀಕ್ಷೆ ಈಗ ಕಡಿಮೆಯಾಗಿದೆ. ಸಕಾರಾತ್ಮಕ ದರವನ್ನು ಕಡಿಮೆ ಮಾಡಲು ಕೋವಿಡ್ ಪರೀಕ್ಷೆಯನ್ನು ಕಡಿಮೆ ಮಾಡಲಾಗಿದೆಯೇ ಎಂಬುದು ಇಲ್ಲಿ ಪ್ರಮುಖ ಪ್ರಶ್ನೆಯಾಗಿದೆ.