ಕರ್ನಾಟಕ

karnataka

ETV Bharat / city

ರಾಜ್ಯದ ಕಾರ್ಮಿಕರಿಗೆ ಅನುಕೂಲವಾಗುವಂತೆ ನಿರ್ಧಾರ.. ಸಚಿವ ಶಿವರಾಂ ಹೆಬ್ಬಾರ್​

ಕೊರೊನಾ ಭೀತಿ ಹುಟ್ಟಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾರ್ಮಿಕರು ಹಾಗೂ ಅವರ ಮಾಲೀಕರ ಹಿತ ಕಾಯಲು ಮುಂದಾಗಿರುವಂತಿದೆ.

Shivaram Hebbar
ಶಿವರಾಂ ಹೆಬ್ಬಾರ್​

By

Published : Mar 23, 2020, 3:58 PM IST

Updated : Mar 23, 2020, 4:26 PM IST

ಬೆಂಗಳೂರು :ರಾಜ್ಯದ ಕಾರ್ಮಿಕರಿಗೆ ಅನುಕೂಲತೆಗಳನ್ನ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ನಿರ್ಣಯ ಕೈಗೊಳ್ಳಲಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ದಿನಗೂಲಿ ಕಾರ್ಮಿಕರ ಪರ ಉತ್ತರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಮಧ್ಯಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯ ನೆರೆವು ನೀಡಲಾಗ್ತಿದೆ. ನಮ್ಮ ರಾಜ್ಯದಲ್ಲೂ ಸಹ ಕಾರ್ಮಿಕರ ಪರ ಯಾವ ಕ್ರಮಕೈಗೊಳ್ಳಬೇಕು ಎಂಬುದನ್ನು ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಶಿವರಾಂ ಹೆಬ್ಬಾರ್​

ಇಂದು ಈ ಸಂಬಂಧ ಸಿಎಂ ಕಾರ್ಮಿಕ ಇಲಾಖೆ ಹಾಗೂ ಕಾರ್ಮಿಕ ಸಂಘಟನೆಗಳ ಜತೆಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಚರ್ಚಿಸಿ ಸಿಎಂ ಮಾರ್ಗದರ್ಶನದಂತೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕಾರ್ಮಿಕರಿಗೆ ಅನುಕೂಲ ಆಗುವ ರೀತಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. ಕಾರ್ಮಿಕರು ಹಾಗೂ ಮಾಲೀಕರನ್ನು ದೃಷ್ಟಿಯಲ್ಲಿರಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಮುಖ್ಯವಾಗಿ ಅವರೆಲ್ಲರ ಆರೋಗ್ಯವನ್ನೂ ಗಮನದಲ್ಲಿರಿಸಿಕೊಂಡಿದ್ದೇವೆ ಎಂದರು.

Last Updated : Mar 23, 2020, 4:26 PM IST

ABOUT THE AUTHOR

...view details