ಬೆಂಗಳೂರು: ರಾಜಧಾನಿಯ ಎಲೆಕ್ಟ್ರಾನಿಕ್ಸಿಟಿ ನೀಲಾದ್ರಿ ಇನ್ವೆಸ್ಟ್ಮೆಂಟ್ ಲೇಔಟ್ನಲ್ಲಿರುವ ಅಪಾರ್ಟ್ಮೆಂಟ್ನ ಐದನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು 2 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಎಲೆಕ್ಟ್ರಾನಿಕ್ಸಿಟಿಯ ನಿವಾಸಿ ದಿವ್ಯಾಂಶ್ ರೆಡ್ಡಿ (2) ಮೃತ ಬಾಲಕ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದಿವ್ಯಾಂಶ್ ರೆಡ್ಡಿ ತಂದೆ ತರಕಾರಿ ವ್ಯಾಪಾರಿಯಾಗಿದ್ದು, ತಾಯಿ ಮನೆ ಕೆಲಸ ಮಾಡಿಕೊಂಡಿದ್ದಾರೆ. ಬಾಲಕನ ಅಜ್ಜಿ ಕೆಲ ದಿನಗಳಿಂದ ನಗರದಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದರು. ಆಗ ನೀಲಾದ್ರಿ ಇನ್ವೆಸ್ಟ್ಮೆಂಟ್ ಲೇಔಟ್ನ ಅಪಾರ್ಟ್ಮೆಂಟ್ವೊಂದರಲ್ಲಿ ಮನೆ ಬಾಡಿಗೆಗಿರುವುದು ಗಮನಕ್ಕೆ ಬಂದಿತ್ತು. ಶುಕ್ರವಾರ ಸಂಜೆ ಮೊಮ್ಮಗ ದಿವ್ಯಾಂಶ ರೆಡ್ಡಿಯನ್ನು ಕರೆದುಕೊಂಡು ಮನೆ ನೋಡಲು ಹೋಗಿದ್ದರು.