ಕರ್ನಾಟಕ

karnataka

ETV Bharat / city

ಪಾರ್ಕಿಂಗ್​ ವಿಚಾರಕ್ಕೆ ಸ್ಯಾಂಡಲ್​ವುಡ್​ ನಟನೊಬ್ಬನಿಂದ ಮಾರಾಣಾಂತಿಕ ಹಲ್ಲೆ.. - Director Rishika

ಟ್ರಂಕ್​ ನಟ ನಿಹಾಲ್ ರಜಪೂತ್ ಮತ್ತು ನಿರ್ದೇಶಕಿ ರಿಷಿಕಾ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ತೆಗೆದು ಹರ್ಷಾ ಎಂಬ ಯುವಕನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪಾರ್ಕಿಂಗ್​ ವಿಚಾರಕ್ಕೆ ಸ್ಯಾಂಡಲ್​ವುಡ್​ ನಟನೊಬ್ಬನಿಂದ ಮಾರಾಣಾಂತಿಕ ಹಲ್ಲೆ

By

Published : Sep 29, 2019, 1:35 PM IST

ಬೆಂಗಳೂರು:ಟ್ರಂಕ್​ ನಟ ನಿಹಾಲ್ ರಜಪೂತ್ ಮತ್ತು ನಿರ್ದೇಶಕಿ ರಿಷಿಕಾ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ತೆಗೆದು ಹರ್ಷಾ ಎಂಬ ಯುವಕನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪಾರ್ಕಿಂಗ್​ ವಿಚಾರಕ್ಕೆ ಸ್ಯಾಂಡಲ್​ವುಡ್​ ನಟನೊಬ್ಬನಿಂದ ಮಾರಾಣಾಂತಿಕ ಹಲ್ಲೆ

ಸೆಪ್ಟೆಂಬರ್‌ 19ರ ಮಧ್ಯಾಹ್ನ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹರ್ಷಾ ಸ್ವರೂಪ್​ ಮನೆ ಮುಂದೆ ನಿರ್ದೇಶಕಿ ರಿಷಿಕಾ ತಮ್ಮ ಬೌನ್ಸ್​ ಬೈಕ್​ ಪಾರ್ಕ್​ ಮಾಡಲು ಮುಂದಾಗಿದ್ದಾರೆ. ಆಗ ಹರ್ಷಾ ತಮ್ಮ ಮನೆ ಮುಂದೆ ನಿಲ್ಲಿಸದಂತೆ ಹೇಳಿದ್ದಾರೆ. ಈ ವೇಳೆ ನಿರ್ದೇಶಕಿ ರಿಷಿಕಾ, ಹರ್ಷಾ ಅವರಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಇದೇ ವಿಷಯ ತಾರಕಕ್ಕೇರಿತ್ತು.

ನಿರ್ದೇಶಕಿ ರಿಷಿಕಾ ಬಳಿಕ ಈ ವಿಷಯವನ್ನ ನಿಹಾಲ್​ಗೆ ತಿಳಿಸಿದ್ದಾರೆ. ಬಳಿಕ ನಟ ನಿಹಾಲ್​, ಹರ್ಷಾಗೆ ಕರೆ ಮಾಡಿ ನೀನು ನನ್ನ ಮನೆಯ ಬಳಿ ಬರಬೇಕು ಎಂದಿದ್ದಾನೆ. ಈ ವೇಳೆ ಬರಲು ಸಾಧ್ಯವಿಲ್ಲ ಎಂದಿರೋದಕ್ಕೆ ನಾನು ಸಿನಿಮಾದ ದೊಡ್ಡ ಕಲಾವಿದ. ನಾನೇ ಬಂದು ಬಾಗಿಲನ್ನ ಒಡೆದು ಹಾಕುತ್ತೇನೆ ಹೇಳಿದ್ದಾನೆ. ನಂತರ 10ಕ್ಕೂ ಹೆಚ್ಚು ಮಂದಿ ಜೊತೆ ಗುಂಪು ಕಟ್ಟಿಕೊಂಡು ಮನೆಯ ಬಳಿ ಬಂದು ರಿಷಿಕಾ ಅನ್ನೋ ಹೆಣ್ಣು ಮಗಳ ಪವರ್ ಏನ್ ಗೊತ್ತಾ ಎಂದು ಆವಾಜ್ ಹಾಕಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ.

ಜೀವ ಬೆದರಿಕೆ ಹಿನ್ನೆಲೆ, ಹರ್ಷಾ ವೈಯ್ಯಾಲಿಕಾವಲ್ ಪೊಲೀಸರಿಗೆ ದೂರು ನೀಡಿ, ಈ ಬಗ್ಗೆ ಕಮಿಷನರ್​ ಅವರಿಗೆ ಇ-ಮೇಲ್ ಮಾಡಿ ವಿಚಾರ ತಿಳಿಸಿದ್ದಾರೆ. ಸದ್ಯ ಕಮಿಷನರ್ ಸೂಚನೆ ಮೇರೆಗೆ FIR ದಾಖಲಿಸಿದ ವೈಯ್ಯಾಲಿಕಾವಲ್ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ. ಸದ್ಯ ಹರ್ಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮುಖ, ಎದೆ ಹಾಗೂ ಕಾಲಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ.

ಗಾಯಾಳು ಹರ್ಷಾ ವಿರುದ್ಧ ಪ್ರತಿದೂರು ದಾಖಲಿಸಿರುವ ನಿಹಾಲ್ ರಜಪೂತ್, ಬೌನ್ಸ್ ಬೈಕ್ ಪಾರ್ಕಿಂಗ್ ಮಾಡುವಾಗ ಹರ್ಷಾ ತಕರಾರು ಮಾಡಿ,ಕೀಳು ಮಟ್ಟದ ಭಾಷೆ ಬಳಸಿ ನಿಂದಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಎರಡು ಕಡೆ ದೂರಿನ ಆಧಾರದ ಮೇಲೆ ತನಿಖೆ ಮುಂದುವರೆದಿದೆ.

ABOUT THE AUTHOR

...view details