ಬೆಂಗಳೂರು: ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮೇಲೆ ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಕ್ಯಾಪ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕೊಲೆ ಯತ್ನ
ರಾತ್ರಿ 9 ಗಂಟೆಯ ಸುಮಾರಿಗೆ ಬಿಇಎಲ್ ಲೇಔಟ್ನ ತಮ್ಮ ಮನೆಯ ಬಳಿ ಕಾರು ಇಳಿಯುತ್ತಿದ್ದಂತೆ ನಾಲ್ಕು ಜನರ ಗುಂಪು ಲಾಂಗು ಮಚ್ಚುಗಳಿಂದ ದಾಳಿ ಮಾಡಿದೆ.
ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಕೊಲೆಯತ್ನ
ಇಂದು ರಾತ್ರಿ 9 ಗಂಟೆಯ ಸುಮಾರಿಗೆ ಬಿಇಎಲ್ ಲೇಔಟ್ನ ತಮ್ಮ ಮನೆಯ ಬಳಿ ಕಾರು ಇಳಿಯುತ್ತಿದ್ದಂತೆ ನಾಲ್ಕು ಜನರ ಗುಂಪು ಲಾಂಗು ಮಚ್ಚುಗಳಿಂದ ದಾಳಿ ಮಾಡಿದೆ ಎನ್ನಲಾಗಿದೆ.
ಈ ವೇಳೆ ಶಶಿಕುಮಾರ್ ರಕ್ಷಣೆಗಾಗಿ ತಮ್ಮ ಬಳಿಯಿದ್ದ ಪಿಸ್ತೂಲ್ ತೆಗೆದಿದ್ದಾರೆ. ಪಿಸ್ತೂಲ್ ನೋಡಿದ ತಕ್ಷಣ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ದಾಳಿಯಿಂದ ಶಶಿಕುಮಾರ್ ಅವರ ತೊಡೆ ಹಾಗೂ ಕೈಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನೆಡೆಸುತ್ತಿದ್ದಾರೆ.
Last Updated : Jul 30, 2021, 12:19 PM IST