ಬೆಂಗಳೂರು: ನೈಸ್ ರಸ್ತೆಯ ಚನ್ನಸಂದ್ರ ಬ್ರಿಡ್ಜ್ ಬಳಿ ನಡುರಸ್ತೆಯಲ್ಲಿ ನಿಂತಿರುವ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಕಾರಿನಲ್ಲಿ ದರ್ಶನ್ ಎಂಬುವರ ಮೃತದೇಹ ಪತ್ತೆಯಾಗಿದೆ. ರಸ್ತೆಯಲ್ಲಿ ಕಾರು ಹೊತ್ತಿ ಉರಿಯುತ್ತಿರುವುದು ಗಮನಿಸಿದ ಸ್ಥಳೀಯರು ನೈಸ್ ರಸ್ತೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಬಂದು ಕಾರಿನ ಬೆಂಕಿ ನಂದಿಸಿದ್ದಾರೆ ಎಂದು ತಿಳಿದು ಬಂದಿದೆ.