ಕರ್ನಾಟಕ

karnataka

ETV Bharat / city

ಆರೋಪಿ ಆದಿತ್ಯರಾವ್ ಕುರಿತು ಡಿಸಿಪಿ ಚೇತನ್ ಸಿಂಗ್ ರಾಥೋರ್ ಹೇಳಿದ್ದೇನು? - banglore DCP Chetan sing rathor news

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯರಾವ್ ಶರಣಾಗಿದ್ದಾನೆ. ಈ ಕುರಿತು ಕೇಂದ್ರವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ಪ್ರತಿಕ್ರಿಯೆ ನೀಡಿದ್ದಾರೆ.

DCP Chetan sing rathor
ಚೇತನ್ ಸಿಂಗ್ ರಾಥೋರ್

By

Published : Jan 22, 2020, 12:14 PM IST

ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯರಾವ್ ಶರಣಾಗಿದ್ದಾನೆ. ಈ ಕುರಿತು ಕೇಂದ್ರವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಪಿ ಚೇತನ್ ಸಿಂಗ್ ರಾಥೋರ್

ಕೇಂದ್ರವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ಮಾತನಾಡಿ, ಆರೋಪಿ ಆದಿತ್ಯರಾವ್ ಶರಣಾದ ತಕ್ಷಣ‌ ಮಂಗಳೂರು ದುರಂತಕ್ಕೆ ನಾನೇ ಹೊಣೆ ಎಂದು ಹೇಳಿದ್ದಾನೆ. ಹೀಗಾಗಿ ಕಂಟ್ರೋಲ್ ರೂಂನಿಂದ ನನಗೆ ಕರೆ ಬಂದಿದ್ದು, ಮೊದಲು ಆತನನ್ನ ವಶಕ್ಕೆ ಪಡೆದು, ಆತನಿಗೆ ಮೆಡಿಕಲ್ ಟೆಸ್ಟ್ ಮಾಡಿದ್ದೀವಿ. ಸದ್ಯ ಆತನ ಪ್ರಾಥಮಿಕ ತನಿಖೆ ನಡೆಯುತ್ತಿದೆ. ಆದರೆ ಘಟನೆ ಮಂಗಳೂರಿನಲ್ಲಿ ನಡೆದ ಕಾರಣ ಈಗಾಗಲೇ ಮಂಗಳೂರು ಪೊಲೀಸರು ಬೆಂಗಳೂರಿಗೆ ಆಗಮಿಸ್ತಿದ್ದಾರೆ ಎಂದರು.

ಮಂಗಳೂರು ಪೊಲೀಸರು ಬಂದ ನಂತ್ರ ಆತನನ್ನು ಇಲ್ಲಿನ ಕೋರ್ಟ್ ಇಲ್ಲಂದ್ರೆ, ಮಂಗಳೂರು ಕೋರ್ಟ್​ಗೆ ಹಾಜರು ಪಡಿಸುವ ಸಾಧ್ಯತೆ ಇದೆ. ಹಾಗೆಯೇ ಸದ್ಯ ಬೆಂಗಳೂರಿನಲ್ಲಿ ನಾವು ಕೇಸ್ ರಿಜಿಸ್ಟರ್​ ಮಾಡಿರಲಿಲ್ಲ. ಯಾಕಂದ್ರೆ ಮಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆಯೋ ಕೆಲ ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಮಧ್ಯಾಹ್ನ 12 ಗಂಟೆಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಸದ್ಯಕ್ಕೆ ತನಿಖೆ ನಡೆಯುತ್ತಿದೆ ಎಂದ್ರು. ಹಾಗೆಯೇ ಘಟನೆ ನಡೆದ ನಂತ್ರ ಆತ ಎಲ್ಲಿದ್ದ, ಅಲ್ಲಿಂದ ಬೆಂಗಳೂರಿಗೆ ಹೇಗೆ ಬಂದ ಅನ್ನುವ ಕುರಿತು ಸಹ ತನಿಖೆ ಮುಂದುವರೆದಿದೆ. ಮತ್ತೊಂದೆಡೆ ಆತ ಮಾರುವೇಷದಲ್ಲಿ ನಗರಕ್ಕೆ ಲಾರಿಯಲ್ಲಿ ಬಂದಿದ್ದಾನೆ ಅನ್ನೋ ಮಾಹಿತಿ ಇದೆ. ಸದ್ಯಕ್ಕೆ ಈ ಎಲ್ಲಾ ವಿಚಾರ ಕುರಿತು ತನಿಖೆ ಮುಂದುವರೆದಿದೆ‌ ಎಂದರು.

For All Latest Updates

TAGGED:

ABOUT THE AUTHOR

...view details