ಕರ್ನಾಟಕ

karnataka

ETV Bharat / city

ಜಾರಕಿಹೊಳಿ ವಿರುದ್ಧ ದೂರು ದಾಖಲು, ತನಿಖೆ ಮುಂದುವರಿಕೆ: ಡಿಸಿಪಿ‌ ಅನುಚೇತ್ - case filed against minister jaraki holi

ಸಚಿವ ಜಾರಕಿಹೊಳಿ ವಿರುದ್ಧ ಓರ್ವ ಮಹಿಳೆಗೆ ಬೆದರಿಕೆ ಒಡ್ಡಿರುವ ಆರೋಪ ಕೇಳಿಬಂದಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ನಗರ ಕೇಂದ್ರ ವಿಭಾಗ ಡಿಸಿಪಿ‌ ಅನುಚೇತ್ ತಿಳಿಸಿದ್ದಾರೆ.

dcp anucheth
ನಗರ ಕೇಂದ್ರ ವಿಭಾಗ ಡಿಸಿಪಿ‌ ಅನುಚೇತ್

By

Published : Mar 3, 2021, 3:48 AM IST

Updated : Mar 3, 2021, 5:28 AM IST

ಬೆಂಗಳೂರು :ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದಿನೇಶ್​ ಕಲ್ಲಹಳ್ಳಿ‌ ದೂರು ನೀಡಿದ್ದಾರೆ. ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದೇವೆ ಎಂದು ಕೇಂದ್ರ ವಿಭಾಗದ ಡಿಸಿಪಿ‌ ಅನುಚೇತ್ ತಿಳಿಸಿದ್ದಾರೆ.

ಓರ್ವ ಮಹಿಳೆಗೆ ಬೆದರಿಕೆ ಒಡ್ಡಿರುವ ದೂರು ಬಂದಿದೆ, ಈ ರೀತಿಯ ಪ್ರಕರಣಗಳಲ್ಲಿ ಕೆಲವೊಂದು ಪ್ರಕ್ರಿಯೆ ಇದೆ, ಅದರ ಮೂಲಕವೇ ತನಿಖೆ ನಡೆಸುತ್ತೇವೆ ಎಂದು ಡಿಸಿಪಿ‌ ಅನುಚೇತ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:ರಾಸಲೀಲೆ ವಿಡಿಯೋ ಫೇಕ್, ಈ ಬಗ್ಗೆ ಸಮಗ್ರ ತನಿಖೆಯಾಗಲಿ: ಸಚಿವ ರಮೇಶ್ ಜಾರಕಿಹೊಳಿ

ಸಚಿವ ಜಾರಕಿಹೊಳಿ ಹೇಳಿಕೆ ಪಡೆಯುವ ವಿಚಾರವಾಗಿ ಮಾತನಾಡಿದ ಅನುಚೇತ್​ ಅವರ ಹೇಳಿಕೆಯನ್ನು ಮುಂದಿನ ದಿನಗಳಲ್ಲಿ ಪಡೆಯುತ್ತೇವೆ. ಮೊದಲಿಗೆ ಸಂತ್ರಸ್ತೆ ಹಾಗೂ ಆಕೆಯ ಕುಟುಂಬಸ್ಥರನ್ನು ಸಂಪರ್ಕಿಸಿ, ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

Last Updated : Mar 3, 2021, 5:28 AM IST

ABOUT THE AUTHOR

...view details