ಕರ್ನಾಟಕ

karnataka

ETV Bharat / city

ಆಕ್ಸಿಜನ್​ ಸಿಲಿಂಡರ್​ ಪೂರೈಕೆಗೆ ಕೊಲ್ಲಾಪುರ ಡಿಸಿ ಅಡ್ಡಗಾಲು: ಮರು ಬಿಡುಗಡೆಗೆ ಮಹಾರಾಷ್ಟ್ರ ಸಚಿವರಿಗೆ ಡಿಸಿಎಂ ಸವದಿ ತಾಕೀತು - bengaluru Cylinder News

ರಾಜ್ಯಕ್ಕೆ ಬರುವ ಆಕ್ಸಿಜನ್​ ಸಿಲಿಂಡರ್​ಗಳನ್ನು ಬಂದ್ ಮಾಡಿದ್ದ ಕೊಲ್ಲಾಪುರ ಜಿಲ್ಲಾಧಿಕಾರಿಗೆ ಮತ್ತೆ ಸರಬರಾಜು ಮಾಡಲು ಅನುಮತಿ ನೀಡುವಂತೆ ಸೂಚಿಸಲು ಡಿಸಿಎಂ ಸವದಿ ಅವರು ಮಹಾರಾಷ್ಟ್ರ ಸಚಿವ ವಿಶ್ವಜಿತ್ ಕದಂ ಅವ​ರಿಗೆ ತಾಕೀತು ಮಾಡಿದ್ದಾರೆ.

Kolhapur DC
ಡಿಸಿಎಂ ಸವದಿ ತಾಕೀತು

By

Published : May 10, 2021, 1:14 PM IST

ಬೆಂಗಳೂರು: ಸಾಂಗ್ಲಿ, ಕೊಲ್ಲಾಪುರ ಬಾರ್ಡರ್​ನಲ್ಲಿರುವ ರಾಜ್ಯದ ಜಿಲ್ಲೆಗಳಿಗೆ ಪ್ರತಿದಿನ ಮಹಾರಾಷ್ಟ್ರದಿಂದ ಖಾಸಗಿ ಆಕ್ಸಿಜನ್ ಸಿಲಿಂಡರ್​ಗಳು ಪೂರೈಕೆ ಆಗುತ್ತಿವೆ. ಆದರೆ ಕೊಲ್ಲಾಪುರ ಜಿಲ್ಲಾಧಿಕಾರಿ ನಿನ್ನೆಯಿಂದಕರ್ನಾಟಕಕ್ಕೆ ಬರುವ ಸಿಲಿಂಡರ್​ಗಳನ್ನು ಬಂದ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದ ಗಡಿಜಿಲ್ಲೆಗಳ ಆಸ್ಪತ್ರೆಗಳಿಗೆ ಸಮಸ್ಯೆ ಆಗಿತ್ತು.

ಹೀಗಾಗಿ ಮಹಾರಾಷ್ಟ್ರ ಸಚಿವ ವಿಶ್ವಜಿತ್ ಕದಮ್ ಜೊತೆ ದೂರವಾಣಿ ಮೂಲಕ ಮಾತನಾಡಿದ ಲಕ್ಷ್ಮಣ ಸವದಿ ಸಮಸ್ಯೆ ಬಗೆಹರಿಸಿದ್ದಾರೆ. ಎಂದಿನಂತೆ ಆಕ್ಸಿಜನ್ಅನ್ನು ಗಡಿಜಿಲ್ಲೆಗಳಿಗೆ ಬರುವುದಕ್ಕೆ ಅನುಮತಿ ನೀಡಬೇಕು ಎಂದು ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದಿಂದಲೇ ತಾಕೀತು ಮಾಡಿದರು.

ಈ ಹಿನ್ನೆಲೆಯಲ್ಲಿ ಡಿಸಿಎಂ ಮಾತಿಗೆ ಒಪ್ಪಿಗೆ ನೀಡಿದ ಮಹಾರಾಷ್ಟ್ರ ಸಚಿವ ಕದಂ, ಕೊಲ್ಲಾಪುರ ಡಿಸಿಗೆ ಸೂಚನೆ ನೀಡುವುದಾಗಿ ದೂರವಾಣಿ ಮೂಲಕ ಭರವಸೆ ನೀಡಿದರು.

ABOUT THE AUTHOR

...view details