ಕರ್ನಾಟಕ

karnataka

ETV Bharat / city

ವಿಶಾಖಪಟ್ಟಣಂನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸಹಾಯವಾಣಿ ಆರಂಭ...ಡಿಸಿಎಂ - ಡಿಸಿಎಂ ಸವದಿಯಿಂದ ಆಂಧ್ರ ಕನ್ನಡಿಗರಿಗೆ ಸಹಾಯವಾಣಿ ಆರಂಭ

ಕೊರೊನಾದಿಂದ ನರಳುತ್ತಿರುವ ಆಂಧ್ರಪ್ರದೇಶ ಇಂದು ವೈಜಾಗ್ ವಿಷಾನಿಲ ದುರಂತದಿಂದ ಮತ್ತಷ್ಟು ತತ್ತರಿಸಿದೆ. ದುರಂತ ಸಂಭವಿಸಿದ ಸ್ಥಳದಲ್ಲಿ ಒಂದು ವೇಳೆ ಕನ್ನಡಿಗರು ಇದ್ದರೆ ಅಂತವರಿಗಾಗಿ ಸಹಾಯವಾಣಿ ಆರಂಭಿಸಲಾಗಿದೆ ಎಂದು ಡಿಸಿಎಂ ಸವದಿ ಹೇಳಿದ್ದಾರೆ.

DCM Savadi
ಡಿಸಿಎಂ ಸವದಿ

By

Published : May 7, 2020, 7:01 PM IST

ಬೆಂಗಳೂರು:ಆಂಧ್ರಪ್ರದೇಶದ ವಿಶಾಖಪಟ್ಟಣದ ಸಮೀಪ ವಿಷಾನಿಲ ಸೋರಿಕೆಯಿಂದ 10 ಮಂದಿ ಮೃತಪಟ್ಟಿದ್ದು ಸುಮಾರು 500 ಮಂದಿ ಅಸ್ವಸ್ಥರಾಗಿದ್ದಾರೆ. ಆಂಧ್ರ ಸಿಎಂ ಜಗನ್​​​ ಮೋಹನ್ ರೆಡ್ಡಿ ಮೃತರ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ವಿಷಾನಿಲ ದುರಂತ ಸಂಭವಿಸಿದ ಪ್ರದೇಶಗಳಲ್ಲಿ ರಾಜ್ಯದವರು ಯಾರಾದರೂ ಸಿಲುಕಿದ್ದರೆ ಅಂತವರನ್ನು ಪತ್ತೆ ಮಾಡಲು ಸಹಾಯವಾಣಿ ಆರಂಭಿಸಿರುವುದಾಗಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ಈ ಘಟನೆ ನಡೆದಿರುವುದು ನಿಜಕ್ಕೂ ಬೇಸರದ ಸಂಗತಿ. ಈ ದುರಂತದಿಂದ ಅಸ್ವಸ್ಥರಾಗಿರುವವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಉಪಮುಖ್ಯಮಂತ್ರಿ ಸವದಿ ಹಾರೈಸಿದರು.

ಘಟನೆ ಸಂಭವಿಸಿದ ಪ್ರದೇಶದಲ್ಲಿ ಯಾರಾದರೂ ಕರ್ನಾಟಕದವರು ಸಿಲುಕಿಕೊಂಡಿದ್ದಾರೆಯೇ ಎಂಬುದನ್ನು ಪತ್ತೆ ಮಾಡಲು ಮತ್ತು ಅವರಿಗೆ ತಕ್ಷಣಕ್ಕೆ ಸೂಕ್ತ ಮಾಹಿತಿ, ಸಹಾಯ ಒದಗಿಸುವ ಉದ್ದೇಶದಿಂದ ನನ್ನ ಉಸ್ತುವಾರಿ ಜಿಲ್ಲೆಯಾದ ರಾಯಚೂರು ಜಿಲ್ಲಾಡಳಿತದ ಮೂಲಕ ಸಹಾಯವಾಣಿ ಪ್ರಾರಂಭಿಸಲಾಗಿದೆ. 08532-228559 ಮತ್ತು 8660761866 ಸಹಾಯವಾಣಿ ನಂಬರ್​​​​​ಗಳಾಗಿದ್ದು ಸಂತ್ರಸ್ತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details