ಬೆಂಗಳೂರು :ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾಗಿರುವ ಆಡಿಯೋ ವೈರಲ್ ಆಗಿರುವುದರ ಹಿಂದೆ ಪಕ್ಷದ ಹೆಸರು ಕೆಡಿಸುವ ಷಡ್ಯಂತ್ರವಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಆಡಿಯೋ ನನ್ನದಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಯಾರೋ ಬೇರೆಯವರು ಪಕ್ಷದ ಹೆಸರು ಕೆಡಿಸಲು ಮಾಡಿದ ಆಡಿಯೋ ಅದು. ಸತ್ಯಾಸತ್ಯತೆ ಬಯಲಿಗೆ ಬರಲಿ, ಕಟೀಲ್ ಸಿಎಂಗೆ ದೂರು ಕೊಟ್ಟಿದ್ದಾರೆ ಎಂದರು.
ಯಡಿಯೂರಪ್ಪ ದೆಹಲಿಗೆ ಹೋಗಿ ವರಿಷ್ಠರ ಭೇಟಿ ಮಾಡಿ ಬಂದಿದ್ದಾರೆ. ವಾಪಸ್ ಬಂದ ಬಳಿಕ ಸಿಎಂ, ನೀರಾವರಿ, ಅಭಿವೃದ್ಧಿ ಬಗ್ಗೆ ಚರ್ಚೆಗೆ ಹೋಗಿದ್ದೆ ಅಂದಿದ್ದಾರೆ. ನಾಯಕತ್ವ ವಿಚಾರ ವರಿಷ್ಠರ ಜತೆ ಚರ್ಚೆ ಆಗಿಲ್ಲ ಅಂತಾ ಸಿಎಂ ಅವರೇ ಸ್ಪಷ್ಟಪಡಿಸಿದ ಮೇಲೆ ನಾವು ಹೇಳಿಕೆ ಕೊಡೋದು ಸರಿಯಲ್ಲ. ಔತಣಕೂಟ ಅನ್ನೋದು ನಮಗೆ ಬಂದ ಮಾಹಿತಿ. ನನಗೆ ಶಾಸಕಾಂಗ ಪಕ್ಷದ ಸಭೆ ಬಗ್ಗೆ ಗೊತ್ತಿಲ್ಲ. ಸಂಜೆ ಸಿಎಂ ಭೇಟಿ ಮಾಡುತ್ತೇನೆ. ಆಗ ಯಾವ ಸಭೆ ಅಂತಾ ಗೊತ್ತಾಗುತ್ತೆ ಎಂದರು.
ನಿಮಗೆ ಸಿಎಂ ಆಗುವ ಇಚ್ಛೆ ಇದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈಗ ಸಿಎಂ ಆಗಬೇಕೆಂಬ ಆಸೆ, ಬಯಕೆ ಎಲ್ಲರಿಗೂ ಇರುತ್ತದೆ. ಮೊದಲು ಶಾಸಕ, ಮಂತ್ರಿ, ಉಪಮುಖ್ಯಮಂತ್ರಿ, ಸಿಎಂ, ಕೇಂದ್ರ ಸಚಿವ ಆಗೋ ಆಸೆ ಇರುತ್ತದೆ. ಸದ್ಯ ಈಗ ಸಿಎಂ ಸ್ಥಾನ ಖಾಲಿ ಇಲ್ಲ. ನಾನು ಸಿಎಂ ಆಗುವ ಪ್ರಶ್ನೆಯೇ ಬರಲ್ಲ. ಸಿಎಂ ಸ್ಥಾನ ಖಾಲಿಯಾದಾಗ ಬಂದು ಕೇಳಿದರೆ ಈ ಪ್ರಶ್ನೆಗೆ ಉತ್ತರ ಕೊಡಬಹುದು. ಆದರೆ, ಈಗ ಸಿಎಂ ಸ್ಥಾನ ಖಾಲಿ ಇಲ್ಲ ಎಂದರು.
ಇದನ್ನೂ ಓದಿ:CM ಬದಲಾಗ್ತಾರೆ ಅಂತ ನಾನು ಹೇಳಿದಾಗ ಯಾರೂ ನಂಬಿರಲಿಲ್ಲ: ಸಿದ್ದರಾಮಯ್ಯ