ಕರ್ನಾಟಕ

karnataka

ETV Bharat / city

'ಒಂದು ವಾಹನಕ್ಕೆ ಒಂದು ಗಿಡ' ಅಭಿಯಾನಕ್ಕೆ ಗ್ರೀನ್​​ ಸಿಗ್ನಲ್ ಕೊಟ್ಟ ಸಾರಿಗೆ ಸಚಿವ - one vehicle for one tree Campaign

ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಮತ್ತು ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರನ್ನು ಭೇಟಿಯಾಗಿ ಒಂದು ವಾಹನಕ್ಕೆ ಒಂದು ಗಿಡ ಅಭಿಯಾನ ಎಂಬ ಕಾರ್ಯಕ್ರಮ ಆರಂಭಿಸುವ ಕುರಿತು ಚರ್ಚಿಸಿದರು.

Tara Anuradha and Minister Lakshmana Savadi
ತಾರಾ ಅನುರಾಧ ಮತ್ತು ಸಚಿವ ಲಕ್ಷ್ಮಣ ಸವದಿ

By

Published : Jan 28, 2021, 4:19 PM IST

ಬೆಂಗಳೂರು:ಸಾರಿಗೆ ಸಂಸ್ಥೆಗಳನ್ನು ಪರಿಸರ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಭೇಟಿಯಾಗಿ ಚರ್ಚಿಸಿದ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಮತ್ತು ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಒಂದು ವಾಹನಕ್ಕೆ ಒಂದು ಗಿಡ ಅಭಿಯಾನ ಕಾರ್ಯಕ್ರಮ ಆರಂಭಿಸಲು ನಿರ್ಧರಿಸಿದರು.

ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ

ಲಾಕ್‌‌ಡೌನ್ ಸಮಯದಲ್ಲಿ ಗಣನೀಯವಾಗಿ ಇಳಿಕೆ ಕಂಡಿದ್ದ ವಾಯು ‌ಮಾಲಿನ್ಯ ಅನ್​ಲಾಕ್​ ನಂತರ ಮತ್ತೆ ಏರಿಕೆ ಕಂಡಿದ್ದು, ಅದರ ತಡೆಗೆ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ. ರಾಜ್ಯದ ಎಲ್ಲಾ ಬಸ್ ನಿಲ್ದಾಣ, ಬಸ್ ಘಟಕ, ತರಬೇತಿ ಕೇಂದ್ರ ಹಾಗೂ ಸಾರಿಗೆ ಕಚೇರಿ ಆವರಣದಲ್ಲಿ ಗಿಡ‌ ಬೆಳೆಸಲಾಗುತ್ತದೆ. ಲಕ್ಷ್ಮಣ ಸವದಿ ಈ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದ್ದು, ಶೀಘ್ರದಲ್ಲೇ ಆರಂಭಿಸಲಾಗುತ್ತದೆ.

ತಾರಾ ಅನುರಾಧ ಹೊರಡಿಸಿರುವ ಪತ್ರ

ABOUT THE AUTHOR

...view details